ಪಶ್ಚಿಮ ಬಂಗಾಳ, ಮಾ. 14 (Daijiworld News/MB): 10 ಸಾವಿರ ಜನರಿದ್ದ ಕ್ರೀಡಾಂಗಣದಲ್ಲಿ ನಡೆದ 'ಖೇಲ್ ಸಮ್ಮನ್' ಸಮಾರಂಭದಲ್ಲಿ, ಜನಸಂದಣಿ ಹೆಚ್ಚಾಗಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಮಮತಾ ಬ್ಯಾನರ್ಜಿಯವರು ಸಲಹೆ ನೀಡಿದ್ದಾರೆ.
ಹಾಗೆಯೇ ಈ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಹ್ಯಾಂಡ್ ಶೇಕ್ ಬದಲಾಗಿ ನಮಸ್ಕಾರ ಮಾಡಿ. ಭಯಪಡಬೇಡಿ, ಜನಸಂದಣಿಯಿಂದ ದೂರವಿರಿ ಎಂದು ತಿಳಿಸಿದರು.
ಸ್ವಲ್ಪ ಸಮಯದವರೆಗೆ ಜನರ ಸಂಪರ್ಕದಿಂದ ದೂರವಿರಿ. ನೀವು ಮಾತನಾಡುವ ವ್ಯಕ್ತಿಯೊಂದಿಗೆ ಅಂತರವನ್ನು ಕಾಯ್ದುಕೊಳ್ಳಿ ಎಂದರು.