ಮುಂಬೈ , ಮಾ.14 (DaijiworldNews/PY) : "ನಾನು ಏನೇ ಮಾಡಿದ್ದರು ಸಹ ಅದನ್ನು ಓಪನ್ ಆಗಿಯೇ ಮಾಡಿದ್ದೇನೆ. ನಾನು ಹಾದಿ ತಪ್ಪಿ ಹೋಗಿದ್ದೆ ಅದರೆ ಮರಳಿ ಬಂದಿದ್ದೇನೆ. ನಾನೀಗ ಇಲ್ಲಿ ಸ್ಥಿರವಾಗಿದ್ದೇನೆ" ಎಂದು ಎನ್ಸಿಪಿ ಪಕ್ಷದ ಅಜಿತ್ ಪವಾರ್ ಹೇಳಿದ್ದಾರೆ.
ಶನಿವಾರ ಬಂಡಾಯದ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ನಾನು ಏನೇ ಮಾಡಿದ್ದರೂ ಕೂಡಾ ಅದನ್ನು ಓಪನ್ ಆಗಿಯೇ ಮಾಡಿದ್ದೇನೆ. ಹಾದಿ ತಪ್ಪಿ ನಾನು ಹೋಗಿದ್ದೆ. ಆದರೆ, ಮರಳಿ ಬಂದಿದ್ದೇನೆ. ಇಲ್ಲಿ ನಾನೀಗ ಸ್ಥಿರವಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಕಳೆದ ಮಹಾರಾಷ್ಟ್ರ ಚುನಾವಣೆಯ ನಂತರ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿ, ಇಡೀ ದೇಶವನ್ನು ಅಚ್ಚರಿಗೊಳಿಸಿದ ಹಾಗೂ ಸ್ವತಃ ತನ್ನ ಪಕ್ಷವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಅಜಿತ್ ಪವಾರ್ ಅವರು ಶನಿವಾರ, "ನಾನು ಏನೇ ಮಾಡಿದ್ದರೂ ಓಪನ್ ಆಗಿಯೇ ಮಾಡಿದ್ದೇನೆ" ಎಂದು ಸುದ್ದಿಗಾರರಿಗೆ ಹೇಳಿಕೆ ನೀಡುವ ಮೂಲಕ ತಮ್ಮ ನಿರ್ಧಾರವನ್ನು ಹೇಳಿದ್ದಾರೆ.
ಕಳೆದ ನವೆಂಬರ್ನಲ್ಲಿ ಅಜಿತ್ ಪವಾರ್ ಅವರು ಎನ್ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಅನುಮತಿ ಇಲ್ಲದೆಯೇ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ಗೆ ಬೆಂಬಲ ಸೂಚಿಸಿದ್ದರು. ಪರಿಣಾಮ ಫಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ, ಎನ್ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ದಿಢೀರ್ ಸರ್ಕಾರ ರಚನೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಬಹುಮತ ಸಾಬೀತುಪಡಿಸಲು ದೇವೇಂದ್ರ ಫಡ್ನವೀಸ್ಗೆ ಕಾಲಾವಕಾಶ ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೇವಲ 80 ಗಂಟೆಗಳಲ್ಲಿ ಸೋಲು ಕಂಡಿತ್ತು. ಅಜಿತ್ ಪವಾರ್ ಅವರು ಯುದ್ಧಕ್ಕೂ ಮೊದಲೇ ಮ್ಮ ಸೋಲನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದ್ದರು.
ಆದರೆ, ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಬಿಜೆಪಿ ಸರ್ಕಾರ ಪತನವಾದ ಕೆಲ ದಿನಗಳ ನಂತರ ಅಗಾಡಿ ಮೈತ್ರಿ ಸಾಧಿಸಿಕೊಂಡು ಸರ್ಕಾರವನ್ನು ರಚಿಸಿದರು. ಆ ಸರ್ಕಾರದಲ್ಲಿಯೂ ಅಜಿತ್ ಪವಾರ ಉಪಮುಖ್ಯಮಂತ್ರಿಯಾದರು.