ನವದೆಹಲಿ, ಮಾ. 15 (Daijiworld News/MB): ನಷ್ಟದಲ್ಲಿರುವ ಯೆಸ್ ಬ್ಯಾಂಕ್ನ್ನು ಬಲಪಡಿಸುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಮಾ. 18ರಿಂದ ಬ್ಯಾಂಕಿನ ಗ್ರಾಹಕರ ಮೇಲೆ ವಿಧಿಸಲಾಗಿರುವ ವ್ಯವಹಾರಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.
ಬ್ಯಾಂಕಿಗೆ ನೂತನ ಆಡಳಿತಾಧಿಕಾರಿ, ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಪ್ರಶಾಂತ್ ಕುಮಾರ್ರನ್ನು ನೇಮಕ ಮಾಡಲಾಗಿದೆ. ಅವರ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದೆ.
ಶುಕ್ರವಾರ ಬ್ಯಾಂಕನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತಾಗಿ ಅಧಿಕೃತ ಪ್ರಕಟನೆ ಹೊರಡಿಸಲಾಗಿದ್ದು ಅದರಂತೆ ಯೆಸ್ ಬ್ಯಾಂಕ್ನ ಶೇ.26 ಷೇರುಗಳನ್ನು ಖರೀದಿಸಲಿರುವ ಎಸ್ಬಿಐ 3 ವರ್ಷಗಳವರೆಗೆ ಅದನ್ನು ಮಾರಾಟ ಮಾಡುವಂತಿಲ್ಲ. ಹಾಗೆಯೇ ಈ ಬ್ಯಾಂಕಿನ ಉಳಿದ ಷೇರುಗಳನ್ನು ಖರೀದಿಸುವ ಸಂಸ್ಥೆಗಳು ಮೂರು ವರ್ಷಗಳವರೆಗೆ ತಮ್ಮ ಹೂಡಿಕೆಯ ಶೇ. 75ರಷ್ಟು ಬಂಡವಾಳವನ್ನು ಕಾಯ್ದುಕೊಂಡಿರಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.