ಮೈಸೂರು, ಮಾ.15 (Daijiworld News/MB) : ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಾಗೂ ದೇಶದ ಮೊದಲ ಕೊರೊನಾದಿಂದಾಗಿ ಮೃತಪಟ್ಟ ಪ್ರಕರಣ ರಾಜ್ಯದಲ್ಲಿ ಆದ ಕಾರಣದಿಂದಾಗಿ ಸರ್ಕಾರ ರಾಜ್ಯ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಪ್ರಸಿದ್ದ ಮೈಸೂರು ಅರಮನೆಗೆ ಪ್ರವಾಸಿಗರ ಭೇಟಿಯನ್ನು ಮಾರ್ಚ್ 22ರವರೆಗೆ ನಿರ್ಬಂಧಿಸಲಾಗಿದೆ.
ಶನಿವಾರ ಮೈಸೂರು ಅರಮನೆ ಸಮಿತಿ ಈ ಕುರಿತಾಗಿ ತಿಳಿಸಿದ್ದು ಮಾರ್ಚ್ 15ರಿಂದ 22ರವರೆಗೆ ಒಂದು ವಾರದ ಮಟ್ಟಿಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶುಕ್ರವಾರ ಮಧ್ಯಾಹ್ನ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಕರ್ನಾಟಕದಲ್ಲಿ ಒಂದು ವಾರದ ಮಟ್ಟಿಗೆ ಶಾಲಾ ಕಾಲೇಜುಗಳು, ಚಿತ್ರಮಂದಿರಗಳು, ಜಾತ್ರೆಗಳು, ಜಿಮ್ ಗಳು, ಸ್ವಿಮ್ಮಿಂಗ್ ಪೂಲ್ ಗಳು, ಸಭೆ ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಈವರೆಗೆ ರಾಜ್ಯದಲ್ಲಿ ಆರು ಜನರಿಗೆ ಸೋಂಕು ತಗಲಿದ್ದು ಕಲಬುರ್ಗಿಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು 93 ಜನರಿಗೆ ಸೋಂಕು ತಗಲಿದ್ದು ಕಲಬುರ್ಗಿಯ ವೃದ್ಧ ಸೇರಿದಂತೆ ಇಬ್ಬರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.