ಮುಂಬೈ, ಮಾ.15 (Daijiworld News/MB) : ವಿಶ್ವದಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಈವರೆಗೆ ಅಧಿಕ ಪ್ರಕರಣ ಕೇರಳದಲ್ಲಿ ದಾಖಲಾಗಿತ್ತು. ಆದರೆ ಈಗ ಮಹಾರಾಷ್ಟ್ರದಲ್ಲಿ 31 ಮಂದಿಗೆ ಕೊರೊನಾ ವೈರಸ್ ತಗಲಿದ್ದು ಮಹಾರಾಷ್ಟ್ರದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿದೆ.
ಈವರೆಗೆ ಕೇರಳದಲ್ಲಿ 22 ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ದಾಖಲಾಗಿದ್ದ 19 ಕೊರೊನಾ ಪ್ರಕರಣಗಳು ಈಗ ಒಂದೇ ದಿನದಲ್ಲಿ 31ಕ್ಕೆ ಏರಿದೆ.
ಶನಿವಾರ ರಾಜ್ಯದಲ್ಲಿ ಹೊಸತಾಗಿ 12 ಪ್ರಕರಣಗಳು ಪತ್ತೆಯಾಗಿದ್ದು 5 ಪಿಂಪ್ರಿ-ಚಿಂಚ್ವಾಡ್ನಲ್ಲಿ, 2 ಯವತ್ಮಾಲ್ನಲ್ಲಿ ಹಾಗೂ ಮುಂಬೈ, ವಾಶಿ, ಕಾಮೋಥೆ, ಕಲ್ಯಾಣ್ ಮತ್ತು ನಾಗ್ಪುರದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
ಎಲ್ಲಾ ಹವಾ ನಿಯಂತ್ರಣ ಮಾಲ್ಗಳು, ಶಾಲೆಗಳು, ಕಾಲೇಜುಗಳು, ತಾಂತ್ರಕ ಸಂಸ್ಥೆಗಳನ್ನು ಮಾ,೩೧ ರವರೆಗೆ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.