ನವದೆಹಲಿ, ಮಾ.15 (Daijiworld News/MB) : ನವದೆಹಲಿಯಲ್ಲಿ ಕೊರೊನಾದಿಂದಾಗಿ ಮೃತಪಟ್ಟ ವೃದ್ಧೆಯ ಮಗನಿಗೂ ಈ ಸೋಂಕು ತಗಲಿದ್ದು ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ.
ಕೊರೊನಾ ಸೋಂಕಿನಿಂದ ಶುಕ್ರವಾರ 69 ವರ್ಷದ ವೃದ್ಧೆ ಸಾವನ್ನಪ್ಪಿದ್ದು ಈಗ ಅವರ ಪುತ್ರನಿಗೂ ಈ ಸೋಂಕು ತಗುಲಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ.
ರಾಜಸ್ಥಾನದಲ್ಲಿ ವಾಸಿಸುತ್ತಿರುವ 46ರ ಹರೆಯದ ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ತಕ್ಷಣ ಆಸ್ಪತ್ರೆಯಲ್ಲಿ ಪ್ರತ್ಯೇಕ ಸ್ಥಳದಲ್ಲಿರಿಸಿ ನಿಗಾವಹಿಸಲಾಗಿದೆ.
ಹಾಗೆಯೇ ಮಾರ್ಚ್ 14ರಂದು ಜರ್ಮನಿಯ ಫ್ರಾಂಕ್ಫರ್ಟ್ನಿಂದ ವಾಪಸ್ ಆಗಿದ್ದ 6 ಪ್ರಯಾಣಿಕರನ್ನು ಕೂಡಾ ಇದೇ ರೀತಿ ಪ್ರತ್ಯೇಕವಾಗಿ ಇರಿಸಲಾಗಿದೆ
ದೇಶದಲ್ಲಿ ಕೊರೊನಾ ವೈರಸ್ನಿಂದಾಗಿ ಈವರೆಗೆ ಇಬ್ಬರು ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 100 ರ ಗಡಿ ದಾಟಿದೆ ಎಂದು ವರದಿ ತಿಳಿಸಿದೆ.