ನವದೆಹಲಿ, ಮಾ.15 (DaijiworldNews/PY) : ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಐವರಲ್ಲಿ ಏಕಾಏಕಿ ಮತ್ತೆ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ಸೋಂಕು ಪೀಡಿತರ ಸಂಖ್ಯೆ ಈ ಮೂಲಕ ಒಟ್ಟಾರೆ 105ಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.
ಮತ್ತೆ ಐದು ಜನರಿಗೆ ಮಹಾರಾಷ್ಟ್ರದಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಮುಂಬೈ, ಪುಣೆ, ಯವತ್ಮಾಲ್, ನಾಗಪುರ್ ಸೇರಿದಂತೆ ಹಲವು ನಗರಗಳಲ್ಲಿ ಒಟ್ಟಾರೆ 31 ಜನರಿಗೆ ಪಾಸಿಟಿವ್ ವರದಿ ಬಂದಿದೆ ಎಂಬುದಾಗಿ ವರದಿ ತಿಳಿಸಿದೆ.
ಜೈಪುರದಲ್ಲಿ 24 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು, ಒಟ್ಟಾರೆ ರಾಜಸ್ತಾನದಲ್ಲಿ 4 ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದ ಕಲಬುರ್ಗಿಯಲ್ಲಿ ಈಗಾಗಲೇ ಒಬ್ಬರು ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬೇಗನೇ ಹರಡುತ್ತಿರುವ ಮಾರಣಾಂಖತಿಕ ಸೋಂಕನ್ನು ಕೇಂದ್ರ ಸರ್ಕಾರ ಶನಿವಾರ ಅಧಿಸೂಚಿತ ವಿಪತ್ತು ಎಂದು ಘೋಷಿಸಿದೆ.
ಭಾನುವಾರ ಸಂಜೆ 5 ಗಂಟೆಗೆ ಸಾರ್ಕ್ ನಾಯಕರೊಂದಿಗೆ ಪ್ರಧಾನಿ ಮೋದಿ ಅವರು ವಿಶ್ವದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕುರಿತಾಗಿ ವಿಡಿಯೋ ಕಾನ್ಫರೆನ್ಸ್ ಮೂಲ ಸಭೆ ನಡೆಲಿದ್ದಾರೆ. ಈ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಸಹ ಪಾಲ್ಗೊಳ್ಳಲಿದ್ದಾರೆ. ಬೇರೆ ದೇಶಗಳಿಗೆ ಯಾವುದೇ ಸಚಿವರು ಪ್ರಯಾಣ ಮಾಡುವಂತಿಲ್ಲ ಎಂದು ಪ್ರಧಾನಿ ಮೋದಿ ಅವರು ಆದೇಶಿಸಿದ್ದು, ನಾಗರಿಕರಲ್ಲಿಯೂ ಕೂಡಾ ಮನವಿ ಮಾಡಿದ್ಧಾರೆ.
1.5 ಲಕ್ಷ ಜನರು ವಿಶ್ವಾದಾದ್ಯಂತ ಕೊರೊನಾ ವೈರಸ್ಗೆ ತುತ್ತಾಗಿದ್ದು, 5,760 ಜನರು ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಮೊದಲು ಕಂಡುಬಂದ ಕೊರೊನಾ ವೈರಸ್ಗೆ 80,824 ಸೋಂಕು ಪೀಡಿತರಿದ್ದು, 65 ಸಾವಿರಕ್ಕಿಂತ ಅಧಿಕ ಜನರು ಗುಣಮುಖರಾಗಿದ್ದಾರೆ.
ಚೀನಾದ ಬಳಿ ಇಟಲಿಗೆ ಲಜ್ಜೆಯಿಟ್ಟ ಕೊರೊನಾ ವೈರಸ್ ಜನರನ್ನು ಆತಂಕಗೊಳಿಸಿದೆ. ಈ ಸೋಂಕಿನಿಂದಾಗಿ ಹೊಸದಾಗಿ 415 ಜನರು ಸಾವನ್ನಪ್ಪಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 1,441 ಕ್ಕೆ ಏರಿಕೆಯಾಗಿದೆ.