ಬೆಂಗಳೂರು, ಮಾ.15 (DaijiworldNews/PY) : ಕೊರೊನಾ ವ್ಯಾಪಿಸುತ್ತಿದೆ ಎಂಬ ಭೀತಿ ಹಿನ್ನೆಲೆ ಕೆಎಸ್ಆರ್ಟಿಸಿ ಸಾರಿಗೆ ವ್ಯವಸ್ಥೆಯನ್ನು ಬಳಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಸಂಸ್ಥೆಯ ಬೊಕ್ಕಸಕ್ಕೆ ಎರಡು ವಾರಗಳಿಂದ ಸುಮಾರು 1.85 ಕೋಟಿ.ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
14 ದಿನಗಳಿಂದ ಕೊರೊನಾ ವೈರಸ್ ಭೀತಿಯಿಂದ ಕೆಎಸ್ಆರ್ಟಿಸಿಯ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಫ್ಲೈ ಬಸ್ಗಳಲ್ಲಿ ಸಾರ್ವಜನಿಕ ಪ್ರಯಾಣಿಕರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೆಎಸ್ಆರ್ಟಿಸಿ ಬಸ್ಗಳ ಪ್ರಮುಖ ಮಾರ್ಗಗಳಾದ ಮಂತ್ರಾಲಯ, ಊಟಿ, ಪಣಜಿ, ಹೈದರಾಬಾದ್, ಕೊಡೈಕೆನಾಲ್, ತಿರುಪತಿ, ಚೆನ್ನೈ, ಕೊಯಮತ್ತೂರು ಮಾರ್ಗಗಳಲ್ಲಿ ಗೋಗುವ 92ಕ್ಕೂ ಅಧಿಕ ಪ್ರೀಮಿಯಂ ಬಸ್ಗಳ ಸೇವೆ ರದ್ದು ಪಡಿಸಲಾಗಿದೆ.
ಬಿಎಂಟಿಸಿಗೆ ಕೊರೊನಾ ಭೀತಿಯಿಂದ 70 ಲಕ್ಷ ರೂ. ಆದಾಯ ನಷ್ಟವಾಗಿದ್ದು, ಸುಮಾರು 40 ಲಕ್ಷ ರೂ ನಮ್ಮ ಮೆಟ್ರೋ ಆದಾಯ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.