ನವದೆಹಲಿ, ಮಾ.15 (DaijiworldNews/PY) : "ದೇಶಾದ್ಯಂತ ಎಲ್ಲ ನಾಗರಿಕರಿಗೆ ಕೊರೊನಾ ವೈರಸ್ ಪತ್ತೆ ಹಚ್ಚುವ ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆ ಉಚಿತ" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ಸರ್ಕಾರ ವೈದ್ಯಕೀಯವಾಗಿ ಕೋವಿಡ್ ವಿರುದ್ಧ ಹೋರಾಡಲು ಶಕ್ತವಾಗಿದೆ. ಆದರೆ, ಈವರೆಗೆ ಶೇ10ರಷ್ಟು ಮಾತ್ರ ದೇಶದ ವೈದ್ಯಕೀಯ ಶಕ್ತಿಯಲ್ಲಿ ಉಪಯೋಗವಾಗಿದೆ" ಎಂದು ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.