ಕಲಬುರ್ಗಿ ಮಾ.15 (DaijiworldNews/SM): ಕೊರೊನಾ ಸೋಕಿನಿಂದ ಮೃತಪಟ್ಟ ವೃದ್ಧ ವ್ಯಕ್ತಿಯ ಕುಟುಂಬದ ಮತ್ತೊಬ್ಬ ವ್ಯಕ್ತಿಗೂ ಸೋಂಕು ಇರುವುದು ದೃಢಪಟ್ಟಿದೆ. ಮೃತ ವೃದ್ಧನ ನೇರ ಸಂಪರ್ಕದಲ್ಲಿದ್ದ ವ್ಯಕ್ತಿಯ ರಕ್ತ ಮತ್ತು ಕಫದ ಪರೀಕ್ಷೆಯಲ್ಲಿ ಕೊರೊನಾ ಇರುವುದು ಖಚಿತವಾಗಿದ್ದು, ಕಲಬುರಗಿ ಜನತೆಯನ್ನು ಮತ್ತಷ್ಟು ಚಿಂತೆಗೀಡು ಮಾಡುವಂತೆ ಮಾಡಿದೆ.
ದೇಶದಲ್ಲೇ ಮೊದಲ ಕೊರೊನಾ ಬಲಿ ಕಲಬುರ್ಗಿಯಲ್ಲಿ ನಡೆದಿತ್ತು. ಈ ಸೋಂಕಿತ ವ್ಯಕ್ತಿಯೊಂದಿಗೆ ನಾಲ್ವರು ನೇರ ಸಂಪರ್ಕದಲ್ಲಿದ್ದರು. ಈ ನಾಲ್ವರ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಶನಿವಾರ ಮೂವರಿಗೆ ಕೊರೊನಾ ಸೋಂಕು ಇಲ್ಲ ಎಂಬ ವರದಿ ಬಂದಿತ್ತು. ಆದರೆ, ರವಿವಾರ ನಾಲ್ಕನೇ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟಪಡಿಸಿದ್ದಾರೆ.