ನವದೆಹಲಿ, ಮಾ 16 ( Daijiworld News/MSP): ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ ಈಗಾಗಲೇ ವಿಚಾರಣೆಗೊಳಪಡಿಸಿದೆ. ರಾಣಾ ಕಪೂರ್ ಜೊತೆಗೆ ಇತರರನ್ನು ವಿಚಾರಣೆಗೆ ಒಳಪಡಿಸಿರುವ ಇಡಿ ಇಲಾಖೆ ಈ ಪ್ರಕರಣಕ್ಕೆ ಸಂಬಂಧಿಸಿ ರಿಲಾಯನ್ಸ್ ಗ್ರೂಪ್ ನ ಚೇರ್ ಮನ್ ಅನಿಲ್ ಅಂಬಾನಿಗೂ ಸಮನ್ಸ್ ನೀಡಿದೆ ಎನ್ನಲಾಗಿದೆ.
ಈ ಹಿಂದೆ ರಾಣಾ ಕಪೂರ್ ಮತ್ತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ನಡುವೆ ಪೇಯೈಟಿಂಗ್ ಒಂದರ ಮಾರಾಟ ವ್ಯವಹಾರ ನಡೆಸಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇದೀಗ ರಾಣಾ ಕಪೂರ್ ಮತ್ತು ಇತರರ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಮನ್ಸ್ ಪಡೆದಿರುವ ಅನಿಲ್ ಅಂಬಾನಿ ಮುಂದಿನ ಸಿನಗಳಲ್ಲಿ ಇಡಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಇದರ ನಡುವೆ ಇಡಿ ವಿಚಾರಣೆ ಮುಂದೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೇಳಿ ಇಡಿ ಗೆ ಅಂಬಾನಿ ಅರ್ಜಿ ಸಲ್ಲಿದ್ದಾರೆ ಎಂದು ತಿಳಿದುಬಂದಿದೆ.