ಮುಂಬೈ, ಮಾ.16 (Daijiworld News/MB) : ಕೊರೊನಾ ಭೀತಿ ಹಿನ್ನಲೆಯಲ್ಲಿ ಭಾರತದಲ್ಲಿ ಎಲ್ಲಾ ಸಿನಿಮಾಗಳ ಚಿತ್ರೀಕರಣವನ್ನು ಮಾರ್ಚ್ 19 ರಿಂದ ಮಾರ್ಚ್ 31 ರ ವರೆಗೆ ನಡೆಸಬಾರದು ಎಂದು ಭಾರತೀಯ ಸಿನಿಮಾಗಳ ನಿರ್ಮಾಪಕರ ಸಂಘ ತಿಳಿಸಿದೆ.
ಈ ಕುರಿತಾಗಿ ಭಾರತೀಯ ಚಲನಚಿತ್ರ ನಿರ್ಮಾಪಕ ಅಶ್ವಿನಿ ಚೌಧರಿಯವರು ಟ್ವೀಟ್ ಮಾಡಿದ್ದು ಎಲ್ಲಾ ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ಗಳ ಚಿತ್ರೀಕರಣವನ್ನು ಮಾರ್ಚ್ 19 ರಿಂದ ಮಾರ್ಚ್ 31 ರವರೆಗೆ ಸ್ಥಗೊತಗೊಳಿಸಬೇಕು ಎಂದ ನಿರ್ಮಾಪಕರ ಸಂಘ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಇದರೊಂದಿಗೆ ನಿರ್ಮಾಪಕರ ಸಂಘದ ಪ್ರಕಟನೆ ಪತ್ರವನ್ನು ಲಗತ್ತಿಸಿದ್ದಾರೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಸಾಂಕ್ರಾಮಿಕವಾಗಿ ಕೊರೊನಾ ವೈರಸ್ ಹರಡುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಎಲ್ಲಾ ರೀತಿಯ ಮನರಂಜನೆಯ ಕಾರ್ಯಕ್ರಮಗಳು, ಕ್ರೀಡೆಗಳು, ಥಿಯೇಟರ್ಗಳು, ಶಾಲಾ ಕಾಲೇಜುಗಳು ಮುಚ್ಚುವಂತೆ ಆದೇಶಿಸಿದ್ದು, ಭಾರತೀಯ ಸಿನಿಮಾಗಳ ನಿರ್ಮಾಪಕರ ಸಂಘ ಭಾನುವಾರ ಸಭೆ ಸೇರಿ ಸಿನಿಮಾಗಳು, ಧಾರಾವಾಹಿಗಳು, ವೆಬ್ ಸಿರೀಸ್ ಸೇರಿದಂತೆ ಎಲ್ಲಾ ರೀತಿಯ ಚಲನಚಿತ್ರಗಳ ಚಿತ್ರೀಕರಣವನ್ನು ಮಾರ್ಚ್ 19 ರಿಂದ ಮಾರ್ಚ್ 31 ರವರೆಗೆ ಸ್ಥಗಿತಗೊಳಿಸಬೇಕು ಎಂದು ತೀರ್ಮಾನಿಸಿದೆ. ಎಲ್ಲಾ ಸಿನಿಮಾ ತಂಡಗಳು ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಹಾಗೂ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.