ಬೆಂಗಳೂರು, ಮಾ.16 (DaijiworldNews/PY) : ರೋಮ್ ಏರ್ಪೋರ್ಟ್ನಲ್ಲಿ ಗರ್ಭಿಣಿ ಸೇರಿದಂತೆ, 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಈ ಪೈಕಿ ಕರ್ನಾಟಕ 30 ಮಂದಿಯೂ ಇದ್ದಾರೆ.
ಈ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮೂಲಕ ವಿದೇಶಾಂಗ ಸಚಿವ ಜೈ ಶಂಕರ್ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಮಾಡಿದ್ಧಾರೆ.
ರೋಮ್ ಏರ್ಪೋರ್ಟ್ನಲ್ಲಿ ಭಾರತೀಯ ಮೂಲದವರು ಬೀಡುಬಿಟ್ಟಿದ್ದು, ಅವರಿಗೆ ಭಾರತಕ್ಕೆ ಬರಲು ಈವರೆಗೆ ಸಾಧ್ಯವಾಗಿಲ್ಲ. ಏರ್ಪೋರ್ಟ್ನ ಸಿಬ್ಬಂದಿ ಭಾರತೀಯರಿಗೆ ಹೆಲ್ತ್ ರಿಪೋರ್ಟ್ ನೀಡುವಂತೆ ಹೇಳಿದ್ದಾರೆ. ಆದರೆ, ವೈದ್ಯರು ಸಂಪರ್ಕಕ್ಕೆ ಸಿಗದೇ ಭಾರತೀಯರು ಸ್ವದೇಶಕ್ಕೆ ಮರಳಲು ಪರದಾಡುವಂತಾಗಿದೆ.
ರೋಮ್ ಏರ್ಪೋರ್ಟ್ನಲ್ಲಿ ಬೆಂಗಳೂರು ಮೂಲದ ಗರ್ಭಿಣಿ ಮಹಿಳೆಯೊರ್ವರೂ ಇದ್ದು, ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ.