ಬಾಘ್ ಪತ್, ಮಾ.16 (Daijiworld News/MB) : ದೇಶದಲ್ಲಿ ರಾಜ್ಯಪಾಲರುಗಳಿಗೆ ಹೆಚ್ಚಿನ ಕೆಲಸ ಇರುವುದಿಲ್ಲ, ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರು ವೈನ್ ಕುಡಿಯುತ್ತಾರೆ ಹಾಗೂ ಗಾಲ್ಫ್ ಆಡುತ್ತಾರೆ ಎಂದು ಗೋವಾ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಲಿಕ್, ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರೂ ಆಗಿದ್ದು, ಉತ್ತರ ಪ್ರದೇಶದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ರಾಜ್ಯಪಾಲರಿಗೆ ಅಧಿಕ ಕೆಲಸ ಯಾವುದೂ ಇರಲ್ಲ. ಕಾಶ್ಮೀರದ ರಾಜ್ಯಪಾಲರಾಗಿರುವ ವ್ಯಕ್ತಿ ಸಾಮಾನ್ಯವಾಗಿ ವೈನ್ ಸೇವಿಸುತ್ತಾರೆ ಹಾಗೂ ಗಾಲ್ಫ್ ಆಡುತ್ತಾರೆ. ಇತರ ರಾಜ್ಯಗಳ ರಾಜ್ಯಪಾಲರುಗಳು ಯಾವುದೇ ವಿವಾದದಲ್ಲಿ ಶಾಮೀಲಾಗದೆ ದೂರವೇ ಇರುತ್ತಾರೆ ಎಂದು ಹೇಳಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.