ನವದೆಹಲಿ, ಮಾ 16 ( Daijiworld News/MSP): ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನಾಲ್ಕು ದಿನಗಳಷ್ಟೇ ಉಳಿದಿದೆ. ಈ ನಡುವೆ ಗಲ್ಲು ಶಿಕ್ಷೆಯಿಂದ ಪಾರಾಗಲು ಕಾನೂನಿನಲ್ಲಿರುವ ಎಲ್ಲಾ ಮಾರ್ಗವನ್ನು ಬಳಸಿಕೊಳ್ಳುತ್ತಿರುವ ನಿರ್ಭಯಾ ಹಂತಕರಿಗೆ ಸುಪ್ರೀಂಕೋರ್ಟ್ ತನ್ನ ಬಾಗಿಲನ್ನು ಬಂದ್ ಮಾಡಿದೆ.
ಅಪರಾಧಿಗಳು ಕಾನೂನಿನ ಎಲ್ಲಾ ಅವಕಾಶಗಳನ್ನೂ ಬಳಸಿಕೊಂಡಿದ್ದಾರೆ ಎಂದಿರುವ ಸುಪ್ರೀಂಕೋರ್ಟ್, ಗಲ್ಲುಶಿಕ್ಷೆ ಪ್ರಶ್ನಿಸಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ತನಗೆ ವಿಧಿಸಲಾಗಿರುವ ಗಲ್ಲುಶಿಕ್ಷೆ ಕಾನೂನುಬಾಹಿರವಾಗಿದ್ದು, ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವಂತೆ ಕೋರಿ ಮುಕೇಶ್ ಸಿಂಗ್ ಸುಪ್ರೀಂಕೋರ್ಟ್'ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದ.ಅದರೆ ಇದನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ನಿರ್ಭಯ ಹಂತಕರನ್ನು ಮಾರ್ಚ್ 20ರಂದು ಬೆಳಗ್ಗೆ 5.30 ಕ್ಕೆ ನೇಣಿಗೇರಿಸಲು ಸಿದ್ಧತೆ ನಡೆಯುತ್ತಿದೆ ಜೈಲಿಗೆ ಆಗಮಿಸಿ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಉತ್ತರಪ್ರದೇಶದ ಮೀರತ್ ಮೂಲಗಳು ಆಡಳಿತ ಮಾಹಿತಿ ರವಾನಿಸಿದೆ.