ನವದೆಹಲಿ, ಮಾ.17 (Daijiworld News/MB) : ವಿಶ್ವದಾದ್ಯಂತ ಕೊರೊನಾ ವೈರಸ್ ಹಬ್ಬಿರುವ ರೀತಿಯಲ್ಲೇ ಕೊರೊನಾ ವೈರಸ್ ಕುರಿತಾದ ಹಾಡು ವಿಶ್ವದಾದ್ಯಂತ ವೈರಲ್ ಆಗಿದೆ.
ಕೊರೊನಾ ವೈರಸ್ ತಡೆಗಟ್ಟಲು ಜಗತ್ತಿನಾದ್ಯಂತ ಬೃಹತ್ ಕಾರ್ಯಕ್ರಮ ನಡೆಸುವುದನ್ನು, ಶಾಲಾ- ಕಾಲೇಜುಗಳು, ಚಿತ್ರಮಂದಿರ ಹಾಗೂ ಶಾಪಿಂಗ್ ಮಾಲ್ಗಳನ್ನು ಬಂದ್ ಮಾಡಲಾಗಿದೆ. ಹಲವು ಕಡೆಗಳಲ್ಲಿ ಮನೆಯಲ್ಲಿಯೇ ಕೆಲಸ ಮಾಡುವಂತೆ ಸಂಸ್ಥೆಗಳು ತಿಳಿಸಿದೆ. ಹೀಗಿರುವಾಗ ಮನೆಯಲ್ಲೇ ಇರುವ ಹಲವರು ಕೊರೊನಾ ಕುರಿತಾಗಿ ಹಾಡುಗಳನ್ನು ಹಾಡಿದ್ದು ಇದೀಗ ಆ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣದಲಲ್ಇ ಹಲವಾರು ಹಾಡುಗಳು ನೆಟ್ಟಿಗರ ಗಮನ ಸೆಳೆದಿದ್ದು ಭಾರತದಲ್ಲಂತೂ ಸಿನಿಮಾ ಹಾಗೂ ಜಾನಪದ ಹಾಡುಗಳ ಟ್ಯೂನ್ಗೆ ಕೊರೊನಾ ಕುರಿತಾದ ಸಾಹಿತ್ಯ ರಚನೆ ಮಾಡಲಾಗಿದೆ.
ಈ ಮೊದಲು ಇಟಲಿಯಲ್ಲಿ ಜನರು ಬಾಲ್ಕನಿಗಳಲ್ಲಿ ನಿಂತು ಹಾಡು, ನೃತ್ಯ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಹಲವಾರು ಹಾಡುಗಳು ವೈರಲ್ ಆಗಿದ್ದು ಆ ಪೈಕಿ ಗೋ ಕೊರೊನಾ ಕೂಡಾ ಒಂದು.
ಶಾರುಖ್ ಖಾನ್ ಅಭಿನಯದ 'ಚಲ್ತೇ ಚಲೇ' ಸಿನಿಮಾದ 'ಸುನೋ ನಾ ಸೊನೊ..' ಹಾಡಿನ ಕೊರೊನಾ ವರ್ಶನ್ ಟ್ವಿಟರ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿವೆ. ಈ ಹಾಡು 'ಕೈ ಕೊಡುವಂತಿಲ್ಲ, ಹೊರಗೂ ಹೋಗುವಂತಿಲ್ಲ, ಮನೆಯಲ್ಲೇ...' ಇಂಥದ್ದೇ ಸಾಲುಗಳನ್ನು ಹಿಂದಿಯಲ್ಲಿ ಒಳಗೊಂಡಿದೆ.
ಕೇಂದ್ರ ಸಚಿವ ರಾಮ್ದಾಸ್ ಅಠವಳೆ ಅವರ 'ಗೋ ಕೊರೊನಾ' ಎಂದು ಜಪಿಸಿರುವಂತೆ ಹೇಳಿರುವ ಘೋಷಣೆಗಳಿಗೆ ರೀಮಿಕ್ಸ್ ಮಾಡಿ, ಪಾಶ್ಚಾತ್ಯ ಸಂಗೀತದ ಸಂಯೋಜನೆ ಮಾಡಲಾಗಿದೆ. ಹಾಗೆಯೇ ಪಂಜಾಬಿ ಶೈಲಿಯ ಮತ್ತೊಂದು ಹಾಡು ಕೂಡಾ ಶ್ಲಾಘನೆ ಪಡೆದಿದೆ.