ಬೆಂಗಳೂರು, ಮಾ.17 (Daijiworld News/MB): ಮುಖ್ಯಮಂತ್ರಿ ಕಮಲ್ ನಾಥ್ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕಾರ್ಯ ಮಾಡಲಿಲ್ಲ. ಅವರ ಆಡಳಿತದಿಂದ ನಿರಾಶೆಗೊಂಡು ಸ್ವಯಂಪ್ರೇರಣೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕರು ತಿಳಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಒತ್ತಡ ನಮ್ಮ ಮೇಲೆ ಇಲ್ಲ. ಕಮಲನಾಥ್ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾದ ಕಡೆಗಣಿಸಿದ್ದಾರೆ. ಆದ್ದರಿಂದ ನಾವು ಸ್ವಯಂಪ್ರೇರಿತವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ಅಧಿವೇಶನವನ್ನು ಕೊರೊನಾ ವೈರಸ್ ನೆಪದಲ್ಲಿ ಮುಂದೂಡಿರುವುದು ಸರಿಯಲ್ಲ. ಇದುವರೆಗೆ ಮಧ್ಯಪ್ರದೇಶದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಅಸಮಾಧಾನ ಪಟ್ಟರು.