ನವದೆಹಲಿ, ಮಾ.18 (Daijiworld News/MB): ಕೇಂದ್ರ ಸರ್ಕಾರ ಅಫ್ಘಾನಿಸ್ತಾನ, ಫಿಲಿಪ್ಪೀನ್ಸ್ ಹಾಗೂ ಮಲೇಶ್ಯಾದ ಪ್ರಯಾಣಿಕರು ದೇಶ ಪ್ರವೇಶಿಸುವುದಕ್ಕೆ ಮಂಗಳವಾರ ನಿರ್ಬಂಧ ಹೇರಿದೆ.
ಮಾರ್ಚ್ 11ರಿಂದ ಮಾರ್ಚ್ 16ರ ವರೆಗೆ ನಿರಂತರ ಪ್ರಯಾಣ ಸಲಹೆಗಳನ್ನು ನೀಡಿರುವ ನಡುವೆ ಈ ಹೆಚ್ಚುವರಿ ಸಲಹೆಯನ್ನು ಕೇಂದ್ರ ಸರಕಾರ ನೀಡಿದೆ.
ಇಂದಿನಿಂದಲ್ಲೇ ಜಾರಿಗೆ ಬರುವಂತೆ ಅಫ್ಘಾನಿಸ್ತಾನ, ಫಿಲಿಪ್ಪೀನ್ಸ್ ಹಾಗೂ ಮಲೇಶ್ಯಾದ ಪ್ರಯಾಣಿಕರು ಭಾರತಕ್ಕೆ ಬರುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಹೆಚ್ಚುವರಿ ಪ್ರಯಾಣ ಸಲಹೆ ಮಂಗಳವಾರ ತಿಳಿಸಿದೆ.
ಈ ಸೂಚನೆ ತಾತ್ಕಾಲಿಕ ಕ್ರಮ. ಆದರೆ ಮಾರ್ಚ್ 31 ರವೆರೆಗೆ ಚಾಲ್ತಿಯಲ್ಲಿ ಇರಲಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಇದನ್ನು ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದೆ.
ಈಗಾಗಲೇ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಿಂದಾಗಿ ಮಾರ್ಚ್ 18 ರಿಂದ ಮಾರ್ಚ್ 31 ರವರೆಗೆ ಪ್ರಯಾಣಿಕರು ದೇಶಕ್ಕೆ ಆಗಮಿಸಿದಂತೆ ನಿಷೇಧ ಹೇರಲಾಗಿದೆ.