ನವದೆಹಲಿ, ಮಾ.18 (DaijiworldNews/MB) : ಕೊರೊನಾ ವೈರಸ್ ಭಾರತೀಯ ಸೇನೆಯ ಯೋಧರೊಬ್ಬರಿಗೂ ತಗುಲಿರುವುದು ಧೃಢಪಟ್ಟಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಲಡಾಕ್ನ ಯೋಧರೊಬ್ಬರಿಗೆ ಕೊರೊನಾವಿರುವುದು ತಿಳಿದು ಬಂದಿದ್ದು ಇತ್ತೀಚೆಗೆ ಅವರ ತಂದೆ ಕೊರೊನಾ ಹೆಚ್ಚು ಹಬ್ಬಿರುವ ಇರಾನ್ನಿಂದ ವಾಪಾಸ್ ಆಗಿದ್ದರು. ಇವರಿಬ್ಬರಿಗೂ ಕೊರೊನಾ ವೈರಸ್ ಇರುವುದು ದೃಢವಾಗಿದ್ದು ಯೋಧ ಸೇರಿದಂತೆ, ಕುಟುಂಬಸ್ಥರನ್ನೂ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ ಭಾರತದಲ್ಲಿ ಕೊರೊನಾ ವೈರಸ್ ಹರಡುವ ಪ್ರಮಾಣ 2ನೇ ಹಂತದಲ್ಲಿದೆ. ಈ ಸೋಂಕು ಸ್ಥಳೀಯವಾಗಿಯೇ ಹಬ್ಬಿದೆ ಇನ್ನೂ ಕೂಡಾ ಸಾಮೂದಾಯಿಕ ಹಂತಕ್ಕೆ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಇನ್ನು ವಿಶ್ವದಾದ್ಯಂತ ಕೊರೊನಾ ಸೋಂಕು ತಗಲಿದವರ ಪ್ರಮಾಣ 1,87,689 ಕ್ಕೆ ಏರಿಕೆಯಾಗಿದ್ದು 7,866 ಮಂದಿ ಸಾವನ್ನಪ್ಪಿದ್ದಾರೆ.