ನವದೆಹಲಿ, ಮಾ.18 (DaijiworldNews/PY) : ಬಿಜೆಪಿ ಸಂಸದ ಸುರೇಶ್ ಪ್ರಭು ಅವರು ಸೌದಿ ಅರೇಬಿಯಾದಿಂದ ವಾಪಾಸಾಗಿದ್ದು, ಇದೀಗ ಅವರು ಸ್ವತಃ ಗೃಹ ಬಂಧನದಲ್ಲಿರುವುದಾಗಿ ಹೇಳಿದ್ದಾರೆ.
ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಭಯ ಹುಟ್ಟಿಸಿರುವ ಈ ವೇಳೆ ಮುಂಜಾಗ್ರತಾ ಸಲುವಾಗಿ ವಿದೇಶದಿಂದ ಆಗಮಿಸುವವರೆಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ.
ಬಿಜೆಪಿ ಸಂಸದ ಸುರೇಶ್ ಪ್ರಭು ಅವರು ಸೌದಿಯಿಂದ ಹಿಂದಿರುಗಿದ್ದು, ಗೃಹ ದಿಗ್ಭಂಧನದಲ್ಲಿರಲು ತೀರ್ಮಾನಿಸಿದ್ದಾರೆ. ಅವರು ಸೌದಿಯಲ್ಲಿ ನಡೆದ ಜಿ20 ಶೆರ್ಪಾ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಇರುವುದಾಗಿ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಜಿ20 ಸಮ್ಮಿತ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ವಿತ್ತ ಸಚಿವ ಸುರೇಶ್ ಪ್ರಭು ಅವರನ್ನು ಆಯ್ಕೆ ಮಾಡಿದ್ದರು.
ಇದಕ್ಕೂ ಮೊದಲು ಕೆಂದ್ರ ಸಚಿವ ವಿ. ಮುರಳೀಧರನ್ ಅವರು ಕೇರಳದಲ್ಲಿ ಕೊರೊನಾ ರೋಗಿಗಳನ್ನು ಇರಿಸಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ನಂತರ ಅವರೂ ಕೂಡಾ ಗೃಹ ದಿಗ್ಭಂದನದಲ್ಲಿದ್ದರು. ನಂತರ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ಬಂದಿತ್ತು.
ಕೊರೊನಾದಿಂದ ಚೀನಾದಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಪೀಡಿತರಾಗಿದ್ದಾರೆ.