ನವದೆಹಲಿ, ಮಾ.18 (DaijiworldNews/PY) : ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾ.17 ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮುಖಾಂತರ ಕೊರೊನಾ ವೈರಸ್ನಿಂದ ಆಗಿರುವ ಜಾಗತಿಕ ಸವಾಲನ್ನು ಎದುರಿಸುವ ಸಂಘಟಿತ ಪ್ರಯತ್ನಗಳ ಬಗ್ಗೆ ಸಂಭಾಷಣೆ ನಡೆಸಿದರು.
ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಅವರು, ಸಾರ್ಕ್ ರಾಷ್ಟ್ರಗಳ ನಾಯಕರ ಜೊತೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ವಿಚಾರವಾಗಿ ಚರ್ಚೆ ನಡೆಸಿದ್ದರು.
ಹಲವಾರು ಜನರ ಆರೋಗ್ಯದ ಮೇಲೆ ಕೊರೊನಾ ವೈರಸ್ ಪರಿಣಾಮ ಬೀರಿದೆ. ಅಲ್ಲದೇ, ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಪ್ರಧಾನಿ ಮೋದಿ ಅವರು, ಸೌದಿ ರಾಜಕುಮಾರರೊಂದಿಗೆ ಇದನ್ನು ನಿಯಂತ್ರಿಸಲು ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಎಂಬುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಉಭಯ ರಾಷ್ಟ್ರದ ಜನರಲ್ಲಿ ಈ ಮಾತುಕತೆಯು ವಿಶ್ವಾಸ ಮೂಡಿಸಲು ಸಹಾಯವಾಗುತ್ತದೆ ಎಂದು ಈ ಸಂದರ್ಭ ತಿಳಿಸಿದ್ದಾರೆ.