ಕೊಚ್ಚಿ, ಮಾ18( Daijiworld News/MSP): ವಿಶ್ವದೆಲ್ಲೆಡೆ ಕರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಅನೇಕರು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೆಲವರು ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಎಷ್ಟು ಜಾಗೃತಿ ವಹಿಸಿದರೂ ಸಾಲದು.
ಸ್ವಚ್ಚತೆ , ಹಾಗೂ ಎಚ್ಚರಿಕೆ ವಹಿಸುವುದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಆಗಾಗ್ಗೆ ಸೋಪ್ನಿಂದ ಕೈತೊಳೆದುಕೊಳ್ಳಬೇಕು ಅಂತ ತಿಳಿಸಿದೆ. ಹಾಗೆಂದು ಕೇವಲ ಕಾಟಾಚಾರಕ್ಕೆ ಕೈ ತೊಳೆದುಕೊಂಡರೆ ಸಾಕಾಗುವುದಿಲ್ಲ. ಅದಕ್ಕೂ ಒಂದು ಕ್ರಮವಿದೆ. ಆಗಾಗ್ಗೆ ಈ ಬಗ್ಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುವಂತ ಪ್ರಯತ್ನಗಳು ನಡೆಯುತ್ತಿರುತ್ತದೆ.
ಸೋಂಕು ನಮ್ಮ ಕೈ ಮೂಲಕ ಬಾಯಿ , ಕಣ್ಣು, ಮೂಗಿನಿಂದ ದೇಹದ ಒಳಗೆ ಪ್ರವೇಶಿಸುವುದರಿಂದ ಆಗ್ಗಾಗ್ಗೆ ಕೈ ತೊಳೆಯುವುದು ಉತ್ತಮ ಅಭ್ಯಾಸವಾಗಿದೆ. ಇದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುವ ಕೇರಳ ಪೊಲೀಸ್ ಇಲಾಖೆ ಹ್ಯಾಂಡ್ವಾಶ್ನ ಮಹತ್ವವನ್ನು ಹೇಳಿದ್ದಾರೆ
ವಿಶಿಷ್ಟವಾಗಿ ಡ್ಯಾನ್ಸ್ ಮೂಲಕ ಕೇರಳ ಪೊಲೀಸರು ಹ್ಯಾಂಡ್ವಾಶ್ನ ಮಹತ್ವವನ್ನ ಸಾರುವ ಪ್ರಯತ್ನ ಮಾಡ್ತಿದ್ದಾರೆ. ಕಳಕಾಟ ಎನ್ನುವ ಹಾಡಿಗೆ ಮಾಸ್ಕ್ ಧರಿಸಿ ಹೆಜ್ಜೆ ಹಾಕುತ್ತಾ ಸರಿಯಾದ ರೀತಿಯಲ್ಲಿ ಕೈ ತೊಳೆಯುವ ವಿಧಾನವನ್ನು ವಿವರಿಸಿದ್ದಾರೆ.