ಭುವನೇಶ್ವರ್, ಮಾ.18 (DaijiworldNews/PY) : ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಾರಣಾಂತಿಕ ಕೊರೊನಾ ವೈರಸ್ನಿಂದ ತಂದೆ ಮೃತಪಟ್ಟ 24 ಗಂಟೆಯೊಳಗೆ ಪುತ್ರ ಐಎಎಸ್ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ಮುಖಾಂತರ ಮಾದರಿ ಅಧಿಕಾರಿ ಎನಿಸಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.
ಐಎಎಸ್ ಅಧಿಕಾರಿ ನಿಕುಂಜಾ ಧಾಲ್ ಅವರು ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ತಂದೆ ಕೊರೊನಾ ವೈರಸ್ಗೆ ತುತ್ತಾಗಿ ನಿಧನರಾಗಿದ್ದರೂ ತಕ್ಷಣವೇ ಕಾರ್ಯಗಳನ್ನು ನೆರವೇರಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕೊರೊನಾ ವೈರಸ್ಗೆ ಜಾಗತಿಕವಾಗಿ 1,81,584 ಜನರಿಗೆ ತಗುಲಿದ್ದು, ಇನ್ನು ಅಧಿಕವಾಗಿ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಎಲ್ಲಾ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿ ಆದೇಶ ಕೂಡಾ ಹೊರಡಿಸಿದ್ದರು. 148 ಕೊರೊನಾ ವೈರಸ್ ಪ್ರಕರಣ ಭಾರತದಲ್ಲಿ ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ಧಾರೆ.
ಈವರೆಗೆ ಒಡಿಶಾದಲ್ಲಿ ಕೇವಲ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. 1993ರ ಬ್ಯಾಚ್ನ ಐಎಎಸ್ ಅಧಿಕಾರಿ ವೈಯಕ್ತಿಕ ನೆಲೆಯಲ್ಲಿ ರಜೆಯನ್ನು ತೆಗೆದುಕೊಂಡು ನಂತರ 24 ಗಂಟೆಯೊಳಗೆ ಕರ್ತವ್ಯ ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ.