ಬೆಂಗಳೂರು, ಮಾ.18 (DaijiworldNews/PY) : ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಎರಡು ಹೊಸ ಪ್ರಕರಣಗಳು ದೃಢಟ್ಟಿದೆ.
ಈ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಖಚಿತಪಡಿಸಿದ್ದು, ಈಗಾಗಲೇ ಇಬ್ಬರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾ.6ರಂದು ಅಮೇರಿಕಾ ಪ್ರವಾಸದಿಂದ ಬಂದ 56 ವರ್ಷದ ವ್ಯಕ್ತಿಗೆ ಸೋಂಕು ತಾಗಿರುವುದು ಖಚಿತವಾಗಿದೆ. ಸ್ಪೇನ್ ದೇಶದಿಂದ ಮತ್ತೋರ್ವ 25 ವರ್ಷದ ಮಹಿಳೆ ವಾಪಾಸ್ಸಾಗಿದ್ದರು.
ಇದರೊಂದಿಗೆ, 13 ಜನರಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ತಗುಲಿದ್ದು ದೃಢಪಟ್ಟಿದೆ. ಭಾರತದಲ್ಲಿ ಒಟ್ಟು 153 ಕೊರೊನಾ ಪ್ರಕರಣಗಳು ಖಚಿತವಾಗಿದೆ.