ಬೆಂಗಳೂರು, ಮಾ.18 (DaijiworldNews/PY) : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆ, ಮಾ.31ರವರೆಗೆ ಕರ್ನಾಟಕ ಲಾಕ್ ಡೌನ್ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಮಾ. 14ರಿಂದ ಶಾಲಾ ಕಾಲೇಜು, ಮಾಲ್ಗಳು, ಚಿತ್ರಮಂದಿರ ಹೀಗೆ ಜನಸಂದಣಿ ಸೇರುವ ಸಮಾರಂಭಗಳನ್ನು ನಿರ್ಬಂಧಿಸಿ ಸಿಎಂ ಬಿಎಸ್ವೈ ಅವರು ಆದೇಶ ನೀಡಿದ್ದರು.
ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಬುಧವಾರ ನಡೆದ ಕ್ಯಾಬಿನೇಟ್ ಸಭೆಯಲ್ಲಿ ಈ ಆದೇಶವನ್ನು ಮಾ.31ರವರೆಗೆ ವಿಸ್ತರಿಸಲು ಆದೇಶಿಸಲಾಗಿದೆ.
ಇದರ ಜೊತೆಗೆ ಸೋಂಕು ನಿಯಂತ್ರಿಸಲು ನಾಲ್ಕು ಟಾಸ್ಕ್ ಫೋರ್ಸ್ಗಳನ್ನು ರಚಿಸಲಾಗಿದೆ. ಈ ಟಾಸ್ಕ್ ಫೋರ್ಸ್ಗಳನ್ನು ಡಾ. ಅಶ್ವಥ್ ನಾರಾಯಣ, ಶ್ರೀರಾಮುಲು, ಬಸವರಾಜ ಬೊಮ್ಮಾಯಿ ಹಾಗೂ ಕೆ. ಸುಧಾಕರ್ ಅವರ ನೇತೃತ್ವದಲ್ಲಿ ರಚಿಸಲಾಗಿದೆ.