ನವದೆಹಲಿ, ಮಾ.18 (DaijiworldNews/PY) : ವಿದೇಶಗಳಲ್ಲಿರುವ ಕನಿಷ್ಠ 276 ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.
ಇರಾನ್ನಲ್ಲಿ 276 ಮಂದಿಯ ಪೈಕಿ 255 ಮಂದಿ ಇದ್ದಾರೆ. ಸಂಯುಕ್ತ ಅರಬ್ ಸಂಸ್ಥಾನದಲ್ಲಿ 12 ಮಂದಿ ಹಾಗೂ 5 ಮಂದಿ ಇಟಲಿಯಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
ಕುವೈತ್, ಶ್ರೀಲಂಕಾ ಹಾಗೂ ಹಾಂಕಾಂಗ್ನಲ್ಲಿ ತಲಾ ಒಬ್ಬ ಭಾರತೀಯನಿಗೆ ಕೊರೊನಾ ವೈರಸ್ ತಗುಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸೋಮವಾರ ಇರಾನ್ನಿಂದ ಸ್ವದೇಶಕ್ಕೆ ಮರಳಿದ ನಾಲ್ಕನೇ ತಂಡದಲ್ಲಿ 53 ಭಾರತೀಯರಿದ್ದರು. ಇದರ ಜೊತೆ ಇರಾನ್ನಿಂದ 389 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.