ಕೊಲ್ಕತ್ತಾ, ಮಾ.18 (DaijiworldNews/PY) : ನಗರದಲ್ಲಿ ಸೋಮವಾರ ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಒಬ್ಬರಿಗೆ ಬಲವಂತವಾಗಿ ಗೋಮೂತ್ರ ಕುಡಿಸಿದ ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಇದೀಗ ಜೈಲು ಪಾಲಾಗಿದ್ದಾರೆ.
ಇದು ಪ್ರಸಾದ, ಅಲ್ಲದೇ ಇದು ಕೊರೊನಾ ವೈರಸ್ ಅನ್ನು ತಡೆಗಟ್ಟುತ್ತದೆ ಎಂದು ಹೇಳಿ ನನಗೆ ಬಲವಂತವಾಗಿ ಗೋಮೂತ್ರ ಕುಡಿಸಲಾಗಿತ್ತು ಎಂದು 34 ವರ್ಷದ ಹೋಂಗಾರ್ಡ್ ಪಿಂಟು ಪ್ರಾಮಾಣಿಕ್ ಅವರು ಆರೋಪಿಸಿದ್ದಾರೆ. ಗೋಮೂತ್ರ ಸೇವಿಸಿ ಎರಡು ಬಾರಿ ವಾಂತಿ ಮಾಡಿದ ಆತನನ್ನು ಇತರರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಬಳಿಕ ಪೊಲೀಸ್ ದೂರು ನೀಡಿದ್ದ.
ಬಂಧಿತ ಬಿಜೆಪಿ ಪದಾಧಿಕಾರಿಯನ್ನು ನಾರಾಯಣ ಚಟರ್ಜಿ ಎಂದು ಗುರುತಿಸಲಾಗಿದೆ. ಸೋಮವಾರದಂದು ನಿಮ್ತಲಾ ರುದ್ರಭೂಮಿಯ ಸಮೀಪವಿರುವ ಅಕ್ರಮ ಗೋ ಆಶ್ರಮತಾಣದಲ್ಲಿ ಗೋಮಾತಾ ಆರಾಧನಾ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭ ಆ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಹಲವಾರು ಜನರಿಗೆ ಆರೋಪಿಯು ಗೋಮೂತ್ರ ಕುಡಿಸಿದ್ದ. ಆ ವೇಳೆ ಬಿ.ಕೆ. ಪಾಲ್ ಅವೆಲ್ಯೂ ನಿಮ್ತಲಾ ಘಾಟ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪಿಂಟು ಪ್ರಮಾಣಿಕ್ ಅವರಿಗೂ ಗೋಮೂತ್ರ ಕುಡಿಸಲಾಗಿತ್ತು ಎನ್ನಲಾಗಿದೆ.
ಚಟರ್ಜಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.