ವಾರಣಾಸಿ, ಮಾ.18 (DaijiworldNews/PY) : ಒಂದೆಡೆ ಕೊರೊನಾ ಜನರಲ್ಲಿ ಭೀತಿ ಹುಟ್ಟಿಸಿದರೆ. ಇನ್ನೊಂದೆಡೆ ವ್ಯಕ್ತಿಯೋರ್ವ ಕೊರೊನಾ ವೈರಸ್ಗೆ ನಾಳೆ ಬಾ ಎಂದು ಹೇಳಿದ ಘಟನೆ ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯಲ್ಲಿ ಪುನೀತ್ ಮಿಶ್ರ ಎಂಬುವವರು ಒಂದು ಬೋರ್ಡ್ ಅನ್ನು ಮನೆಗಳ ಮುಂದೆ ಹಾಕಿದ್ದಾರೆ. ಈ ಫಲಕವು ಈಗ ಎಲ್ಲರ ಗಮನ ಸೆಳೆದಿದೆ. ಈ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಕಟ ಮಾಡಿವೆ. ಅದಕ್ಕೆ ಕಾರಣ ಆತ ಹಾಕಿದ್ದ ಕೊರೊನಾ ಬಗೆಗಿನ ಫಲಕ.
ಪುನೀತ್ ಮಿಶ್ರ ಅವರು ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವ ಆಸೆ ಹೊಂದಿದ್ದರು. ಹಾಗಾಗಿ, ಮನೆಗಳ ಮುಂದೆ ಓ ಕೊರೊನಾ ಕಲ್ ಆನಾ ( ಓ ಕೊರೊನಾ ನಾಳೆ ಬಾ) ಎಂಬುದಾಗಿ ಒಂದು ಬೋರ್ಡ್ ಹಾಕಿದ್ದಾರಂತೆ. ಕೊರೊನಾ ವೈರಸ್ ಬಗ್ಗೆ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ರೀತಿಯಾಗಿ ಅರಿವು ಮೂಡಿಸುತ್ತಿದ್ದಾರಂತೆ.
ಮನೆಯ ಮುಂದಿರುವ ಆ ಬೋರ್ಡ್ ಅನ್ನು ನೋಡಿದ ಜನರು ಫೋಟೋ ತೆಗೆದುಕೊಳ್ಳುತ್ತಾರೆ. ಕೊರೊನಾ ಬಗ್ಗೆ ಬೋರ್ಡ್ ನೋಡುವ ಜನರಿಗೆ ಮಾಹಿತಿ ನೀಡುತ್ತೇವೆ ಎಂದು ಪುನೀತ್ ಹೇಳಿದ್ದಾರೆ. ಭಾರತಲ್ಲಿಯೂ ಕೊರೊನಾ ಹರಡುತ್ತಿದ್ದು, ಜನರು ಸುರಕ್ಷತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಓ ಕೊರೊನಾ ಕಲ್ ಆನಾ ಎಂದು ಫಲಕ ಹಾಕಲು ಬಾಲಿವುಡ್ನ ಸ್ತ್ರೀ ಸಿನಿಮಾ ಪ್ರೇರಣೆ ನೀಡಿದೆ. ಆ ಸಿನಿಮಾದಲ್ಲಿ ಓ ಸ್ತ್ರೀ ಕಲ್ ಅನಾ..? ಎಂದು ಬರೆದಿತ್ತು. ಕೊರೊನಾದಿಂದ ವಿಶ್ವದಲ್ಲಿ ಈವರೆಗೆ 8 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಭಾರತದ ಮೂರು ಮಂದಿ ಸಾವನ್ನಪ್ಪಿದ್ದಾರೆ.
ವಿಶ್ವದಾದ್ಯಂತ ಕೊರೊನಾ ವೈರಸ್ ಹಬ್ಬಿರುವ ರೀತಿಯಲ್ಲೇ ಕೊರೊನಾ ವೈರಸ್ ಕುರಿತಾದ ಹಾಡು ವಿಶ್ವದಾದ್ಯಂತ ವೈರಲ್ ಆಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹಾಡುಗಳು ನೆಟ್ಟಿಗರ ಗಮನ ಸೆಳೆದಿದ್ದು ಭಾರತದಲ್ಲಂತೂ ಸಿನಿಮಾ ಹಾಗೂ ಜಾನಪದ ಹಾಡುಗಳ ಟ್ಯೂನ್ಗೆ ಕೊರೊನಾ ಕುರಿತಾದ ಸಾಹಿತ್ಯ ರಚನೆ ಮಾಡಲಾಗಿದೆ.