ನವದೆಹಲಿ, ಮಾ.19 (Daijiworld News/MB) : ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಮತ್ತು ಮಾ.19ರಿಂದ ಮಾ.31ರವರೆಗೆ ನಿಗದಿಯಾಗಿರುವ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು ಬುಧವಾರ ಪ್ರಕಟನೆಯಲ್ಲಿ ತಿಳಿಸಿದೆ.
ಮುಂದೂಡಲಾಗಿರುವ ಪರೀಕ್ಷೆಗಳ ನೂತನ ವೇಳಾಪಟ್ಟಿಯನ್ನು ಮಾ.31ರ ನಂತರ ಪ್ರಕಟನೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಹಾಗೆಯೇ ಈಶಾನ್ಯ ಭಾರತ ದೆಹಲಿ ಅಭ್ಯರ್ಥಿಗಳಿಗಾಗಿ ಮರುನಿಗದಿಗೊಳಿಸಲಾಗಿದ್ದ ಮರುಪರೀಕ್ಷೆಗಳನ್ನು ಕೂಡಾ ಮುಂದೂಡಲಾಗಿದೆ.