ಚಂಡೀಗಡ, ಮಾ.19 (Daijiworld News/MB) : ಚಂಡೀಗಡದಲ್ಲಿ 23 ಹರೆಯದ ಯುವತಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು ದೇಶದಲ್ಲಿ ಸೋಂಖಕಿತರ ಸಂಖ್ಯೆ 170 ಕ್ಕೆ ಏರಿದೆ.
ಸೋಂಕಿತ ಯುವತಿಯು ಭಾನುವಾರ ಬ್ರಿಟನ್ನಿಂದ ಮರಳಿದ್ದು ಸೋಂಕಿನ ಲಕ್ಷಣಗಳಿದ್ದ ಕಾರಣದಿಂದಾಗಿ ರಕ್ತದ ಮಾದರಿಯ ಪರೀಕ್ಷೆ ಮಾಡಲಾಗಿತ್ತು. ಚಂಡೀಗಡದಲ್ಲಿ ಇದು ಮೊದಲ ಪ್ರಕರಣವಾಗಿದೆ.
ತೆಲಂಗಾಣದಲ್ಲಿ ಕೋವಿಡ್-19 ಸೋಂಕು ಇರುವ 7 ಪ್ರಕರಣಗಳು ವರದಿಯಾಗಿದೆ. ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ ಇಂಡೋನೇಷ್ಯಾದ ಪ್ರಜೆಗಳಿಗೆ ಈ ಸೋಂಕು ಇರುವುದು ಪತ್ತೆಯಾಗಿದೆ. ಇಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.