ನವದೆಹಲಿ, ಮಾ.19 (DaijiworldNews/PY) : ಜಗತ್ತಿನಾದ್ಯಂತ ಕೊರೊನಾ ವೈರಸ್ನಿಂದಾಗಿ 2.5 ಕೋಟಿ. ರೂ ನಷ್ಟ ಉಂಟಾಗಬಹುದು ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್ಒ) ಬಿಡುಗಡೆಗೊಳಿಸಿರುವ ಆರಂಭಿಕ ವರದಿ ಕೋವಿಡ್-19 ಆಂಡ್ ವರ್ಲ್ಡ್ ಆಫ್ ವರ್ಕ್: ಇಂಪಾಕ್ಟ್ ಆಂಡ್ ರೆಸ್ಪಾನ್ಸಸ್ನಲ್ಲಿ ಉಲ್ಲೇಖಿಸಲಾಗಿದೆ.
ಸಮನ್ವಯ ಸಾಧಿಸಿ ನೀತಿ ರೂಪಿಸಿ ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಿದ್ದಲ್ಲಿ ಉದ್ಯೋಗ ಕ್ಷೇತ್ರದ ಮೇಲೆ ಜಾಗತೀಕವಾಗಿ ಕೊರೊನಾ ವೈರಸ್ ಬೀರುವ ಪರಿಣಾಮವನ್ನು ತಗ್ಗಿಸಬಹುದು ಎಂಬುದಾಗಿಯೂ ವರದಿ ತಿಳಿಸಿದೆ.
ಉದ್ಯೋಗಿಗಳಿಗೆ ಉದ್ಯೋಗ ಉಳಿಸಿಕೊಳ್ಳಲು ಬೆಂಬಲ, ಸಾಮಾಜಿಕ ಭದ್ರತೆ, ಹಾಗೂ ತೆರಿಗೆ ರಿಯಾಯಿತಿ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬಹುದು. ಮಧ್ಯ ಗಾತ್ರದ ಹಾಗೂ ಸಣ್ಣ, ಅತಿ ಸಣ್ಣ ಉದ್ದಿಮೆಗಳಿಗೆ ಇಂತಹ ಸವಲತ್ತುಗಳು ಅವಶ್ಯಕ ಎಂದು ವರದಿ ವಿವರಿಸಿದೆ.
ನಿರ್ದಿಷ್ಟ ಆರ್ಥಿಕ ವಲಯಗಳಿಗೆ ಆರ್ಥಿಕ ಸಹಾಯ ಒದಗಿಸುವ ಪ್ರಸ್ತಾಪವನ್ನು ಅದರಲ್ಲಿ ಮಾಡಲಾಗಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿದ್ದಂತೆ, ಉದ್ಯೋಗಿಗಳ ಕೆಲಸದ ಅವಧಿ ಹಾಗೂ ವೇತನಗಳಲ್ಲಿಯೂ ಕಡಿಮೆಯಾಗಬಬಹುದು ಎಂದು ವರದಿ ತಿಳಿಸಿದೆ. ಇದು ಮುಂದೆ ವಿವಿಧ ವಸ್ತಗಳಿಗೆ ಕಡಿಮೆ ಬೇಡಿಕೆಗೆ ಕಾರಣವಾಗಿ ಉದ್ಯಮ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.