ಬೆಂಗಳೂರು, ಮಾ.20 (DaijiworldNews/PY) : "ರಾಜಕಾರಣದ ವಿಚಾರವಾಗಿ ಜಿಗುಪ್ಸೆ ಬಂದಿದ್ದು ಸತ್ಯ. ಆದರೆ, ನಾನು ರಾಜಕಾರಣದಿಂದ ಓಡಿ ಹೋಗುವವನಲ್ಲ" ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಹಿಂದೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ, ಅದನ್ನು ಪಕ್ಷ ಒಪ್ಪಲಿಲ್ಲ. ಪ್ರಸ್ತುತ ಚುನಾವಣೆಗೂ ಹಾಗೂ 1983ರ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ" ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಕೆ.ಆರ್.ರಮೇಶ್ಕುಮಾರ್ ಅವರು, "ನೀವು ರಾಜಕೀಯದಲ್ಲಿ ಎಲ್ಲಿಯವರೆಗೆ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಮುಂದುವರಿಯಬೇಕು" ಎಂದರು.