ಮುಂಬೈ, ಮಾ.20 (DaijiworldNews/PY) : ಬಾಲಿವುಡ್ನ ಪ್ರಸಿದ್ದ ಗಾಯಕಿ ಕನ್ನಿಕಾ ಕಪೂರ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಸದ್ಯ ಗಾಯಕಿ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನ್ನಿಕಾ ಅವರು ಮ.15ರಂದು ಲಂಡನ್ನಿಂದ ಲಕ್ನೋಗೆ ಮರಳಿದ್ದರು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ, ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ಧಾರೆ. ನಾಲ್ವರು ಮೃತಪಟ್ಟಿದ್ಧಾರೆ ಎಂದು ತಿಳಿದುಬಂದಿದೆ.