ಬೆಂಗಳೂರು, ಮಾ.20 (DaijiworldNews/PY) : ಕಲಬುರ್ಗಿಯಲ್ಲಿ ಮಾ.21ರಿಂದ ಕೊರೊನಾ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಈ ವಿಚಾರವಾಗಿ ಅವರು ಟ್ವೀಟ್ ಮಾಡಿದ್ದು, "ಕೇಂದ್ರದ ನೆರವಿನಿಂದ ರಾಜ್ಯ ಸರ್ಕಾರ ಕಲಬುರ್ಗಿಯಲ್ಲಿ ಕೊರೊನಾ ವೈರಸ್ ಪರೀಕ್ಷಾ ಪ್ರಯೋಗಾಲಯವನ್ನು ಮಾರ್ಚ್ 21ರಿಂದ ಆರಂಭಿಸಿದ್ದು ಶಂಕಿತರನ್ನು ಪತ್ತೆ ಹಚ್ಚಲು ಈ ಮುಂಚೆ ಆಗುತ್ತಿದ್ದ ವಿಳಂಬ ತಪ್ಪಲಿದೆ" ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೆರವಿನಿಂದ ಆಗುತ್ತಿರುವ ಈ ಪ್ರಯೋಗಾಲಯ ಕೇಂದ್ರವನ್ನು ಪ್ರಾರಂಭಿಸಲು ಈಗಾಗಲೇ ನವದೆಹಲಿಯಿಂದ ರೀಜೆಂಟ್ ಬಂದಿದ್ದು, ಬೆಂಗಳೂರಿನಿಂದ ತಜ್ಞರ ತಂಡ ತೆರಳಿ ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ ಎಂದರು.