ಬೆಂಗಳೂರು, ಮಾ.20 (DaijiworldNews/PY) : ನಕಲಿ ಸ್ಯಾನಿಟೈಸರ್ ತಯಾರಿಕೆಯ ಬಗ್ಗೆ ಖಚಿತ ಮಾಹಿತಿ ತಿಳಿದ ಬೆಂಗಳೂರು ಸಿಸಿಬಿ ಪೊಲೀಸರು ನಗರದ ಚಾಮರಾಜಪೇಟೆ ಮತ್ತು ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಗೊಡೌನ್ಗಳ ಮೇಲೆ ದಾಳಿ ನಡೆಸಿದ್ದು, ಆರೋಪಿಗಳ ಸಹಿತ ಸುಮಾರು 56 ಲಕ್ಷ ಮೌಲ್ಯದ ನಕಲಿ ಸ್ಯಾನಿಟೈಸರ್ ಮತ್ತು ಹ್ಯಾಡ್ ರಬ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ರಾಜು ಮತ್ತು ಚಂದನ್ ಎಂದು ಹೇಳಲಾಗಿದೆ. ಜ್ಯೋತಿ ಕೆಮಿಕಲ್ಸ್ ಹಾಗೂ ಸ್ವಾತಿ ಗೌಡಾನ್ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಸಿದ್ಧಪಡಿಸಿದ್ದ 100, 120, 200, 500 ಎಮ್ಎಲ್ನ ಒಟ್ಟು 8,500 ನಕಲಿ ಸ್ಯಾನಿಟೈಸರ್ ಬಾಟಲಿಗಳು, 4,500 ಖಾಲಿ ಪ್ಲಾಸ್ಟಿಕ್ ಬಾಟಲಿಗಳು, 4,500 ಸ್ಟಿಕ್ಕರ್ಗಳು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ.
ನಗರದಲ್ಲಿ ಇಂತಹ ನಕಲಿ ಸ್ಯಾನಿಟೈಸರ್ ತಯಾರಿಸುವ ಕಂಪೆನಿಗಳು ಪ್ರಾರಂಭವಾಗಿರುವ ಬಗ್ಗೆಮಮಾಹಿತಿಯಿದ್ದು, ಸಾರ್ವಜನಿಕರು ನಕಲಿ ಸ್ಯಾನಿಟೈಸರ್ಗೆ ಮಾರುಹೋಗದೇ, ಅಧಿಕೃತ ತಯಾರಿಕಾ ಕಂಪನಿಗಳ ಬ್ರ್ಯಾಂಡೆಡ್ ಸ್ಯಾನಿಟೈಸರ್ಗಳನ್ನೇ ಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.