ಚಿಕ್ಕಬಳ್ಳಾಪುರ, ಮಾ21 ( Daijiworld News/MSP): ಶುಕ್ರವಾರವಷ್ಟೇ ಕರ್ನಾಟಕದಲ್ಲಿ ಯಾವುದೇ ಸೋಂಕು ದೃಢಪಡದೆ ಕೊಂಚ ನೆಮ್ಮದಿ ಮೂಡಿಸಿದ್ದ ರಾಜ್ಯದಲ್ಲಿ ಮತ್ತೊಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಮೆಕ್ಕಾದಿಂದ ವಾಪಸ್ಸಾಗಿದ್ದ 32 ವಯಸ್ಸಿನ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ, ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ್ದ 32 ವರ್ಷದ ವ್ಯಕ್ತಿಯೊಬ್ಬರಿಗೆ #Covid19 ಸೋಂಕು ದೃಡಪಟ್ಟಿದೆ. ಅವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ಅಂತ ಆರೋಗ್ಯ ಸಚಿವ ಶ್ರೀರಾಮಲು ಟ್ವಿಟ್ ಮಾಡಿದ್ದಾರೆ.
ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 16ಕ್ಕೇರಿದೆ. ಒಟ್ಟಾರೆ ಶುಕ್ರವಾರ ಮತ್ತು ಶನಿವಾರ ದೇಶದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡಿದೆ.