ಬೆಂಗಳೂರು, ಮಾ.21 (Daijiworld News/MB) : ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸೋಂಕು ಹರಡುವಿಕೆ ತಡೆಗಟ್ಟಲೆಂದು ಇದೀಗ ಕ್ಯಾಬ್ ಕಂಪನಿಗಳಾದ ಓಲಾ ಮತ್ತು ಉಬರ್ ತನ್ನ ಪೂಲ್ ಡ್ರೈವ್ ಸೇವೆಯನ್ನು ರದ್ದು ಮಾಡಿದೆ.
ಕೊರೊನಾ ಸೋಂಕು ಹೆಚ್ಚಾದ ಬಳಿಕ ಓಲಾ ಹಾಗೂ ಉಬರ್ಗಳಲ್ಲಿ ಪೂಲ್ ರೈಡ್ ಮಾಡುವ ಜನರ ಸಂಖ್ಯೆ ಕಡಿಮೆಯಾಗಿದ್ದು ಸೋಂಕಿನ ಕುರಿತು ಆತಂಕಗೊಂಡಿರುವ ಜನರು ಪೂಲ್ ರೈಡ್ ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಸೋಂಕು ಹರಡುವಿಕೆ ತಡೆಗಟ್ಟಲು ನರೇಂದ್ರ ಮೋದಿಯವರು ದೇಶದಲ್ಲಿ ಭಾನುವಾರ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದಾರೆ.