ನವದೆಹಲಿ, ಮಾ.21 (DaijiworldNews/PY) : ರೋಮ್ನಲ್ಲಿ ಕೊರೊನಾ ವೈರಸ್ನಿಂದ ಎದುರಾಗಿರುವ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾದ ಭಾರತೀಯರನ್ನು ಕರೆತರಲು ಸರ್ಕಾರಿ ಸ್ವಾಮ್ಯದ ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಶನಿವಾರ ವಿಮಾನ ಕಳುಹಿಸುತ್ತಿದೆ.
ದೆಹಲಿ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ 787 ಡ್ರೀಮ್ಲೈನರ್ ವಿಮಾನವು ಶನಿವಾರ ಮಧ್ಯಾಹ್ನಮ 2.30ಕ್ಕೆ ರೋಮ್ಗೆ ಪ್ರಯಾಣಿಸಲಿದೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಏರ್ ಇಂಡಿಯಾ ವಿಮಾನದ ಮೂಲಕ ರೋಮ್ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರು ದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ವಿಮಾನ ನಿಲ್ದಾಣಗಳಲ್ಲಿ ಮಾ.22 ಭಾನುವಾರದಿಂದ ಯಾವುದೇ ಅಂತರಾಷ್ಟ್ರೀಯ ವಿಮಾನಗಳು ಇಳಿಯಲು ಅವಕಾಶವಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ಈ ನಿರ್ಬಂಧವನ್ನು ಒಂದು ವಾರ ಮುಂದುವರೆಸಲು ತೀಮಾನಿಸಲಾಗಿದೆ.