ನವದೆಹಲಿ, ಮಾ.21 (Daijiworld News/MB) : ಕೊರೊನಾ ವೈರಸ್ನಿಂದಾಗಿ ದಿನಗೂಲಿ ಕಾರ್ಮಿಕರು ತಮ್ಮ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರದ ಪಡಿತರ ಯೋಜನೆಯನ್ನು ಅವಲಂಬಿಸಿದ 72 ಲಕ್ಷ ಜನರಿಗೆ ಉಚಿತ ಪಡಿತರ ನೀಡಲಾಗುವುದು. ಪ್ರತಿಯೊಬ್ಬರಿಗೂ 5 ಕೆ.ಜಿ. ಪಡಿತರ ಬದಲು 7.5 ಕೆಜಿ ಪಡಿತರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಜಧಾನಿಯಲ್ಲಿ 5 ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಮತ್ತು ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿಧವೆಯರ, ವೃದ್ಧರ ಮತ್ತು ದಿವ್ಯಾಂಗರ ಪಿಂಚಣಿಯನ್ನು ದ್ವಿಗುಣಗೊಳಿಸಲಿದ್ದೇವೆ. ಉಚಿತವಾಗಿ ರಾತ್ರಿ ಸಮಯ ಆಹಾರ ವಿತರಿಸಲಿದ್ದೇವೆ ಎಂದವರು ಹೇಳಿದರು.