ಬೆಂಗಳೂರು, ಮಾ.21 (DaijiworldNews/PY) : ಕೊರೊನಾ ಸೋಂಕು ಹಿನ್ನೆಲೆ ಎಪ್ರಿಲ್ 1ರಂದೇ ಎಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಶನಿವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಕರ್ಫ್ಯೂ ಭಾನುವಾರ ಇರುವುದರಿಂದ ನ್ಯಾಯಬೆಲೆ ಅಂಗಡಿಳು ಮುಚ್ಚಿರಲಿವೆ. ಆದರ, ಪಡಿತರವನ್ನು ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ವಿತರಿಸಲಾಗುವುದು ಎಂದು ತಿಳಿಸಿದರು.