ನವದೆಹಲಿ, ಮಾ.22 (Daijiworld News/MB) : ದೇಶವನ್ನೇ ಬೆಚ್ಚಿ ಬೀಳಿಸಿದ್ದ, ರಾಜಧಾನಿ ದೆಹಲಿಯಲ್ಲಿ 16 ಡಿಸೆಂಬರ್ 2012 ರಂದು ಸಂಭವಿಸಿದ 23ರ ಹರೆಯದ ಫಿಸಿಯೋಥೆರಪಿ ವಿದ್ಯಾರ್ಥಿನಿ ನಿರ್ಭಯಾರವರ ಅತ್ಯಂತ ಭೀಭತ್ಸ ಹಾಗೂ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಹಂತಕರಿಗೆ ನೀಡಲಾದ ಗಲ್ಲು ಶಿಕ್ಷೆಯನ್ನು "ಬೇಟೀ ಬಚಾವೋ ಬೇಟೀ ಪಡಾವೋ" ಅಭಿಯಾನದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಸಮರ್ಥಿಸಿದ್ದಾರೆ.
7 ವರ್ಷಗಳಿಗೂ ಅಧಿಕ ಕಾಲ ನಡೆದ ಕಾನೂನು ಸಮರದಲ್ಲಿ ನಿರ್ಭಯಾರವರ ಹೆತ್ತವರ ಸತತ ಪರಿಶ್ರಮಕ್ಕೆ ಜಯ ಸಿಕ್ಕಿದೆ. ದೇಶದಾದ್ಯಂತ ಹೆಣ್ಣು ಮಕ್ಕಳ ಸುರಕ್ಷತೆಗೆ ಇನ್ನೂ ಹೆಚ್ಚಿನ ವಿಶೇಷ ಆದ್ಯತೆ ನೀಡಬೇಕು. ಸರಕಾರಗಳ ಜೊತೆಗೆ ಸಾರ್ವಜನಿಕರು ಸಹ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಮಹಿಳಾ ಸಶಕ್ತೀಕರಣಕ್ಕೆ ಕೈಜೋಡಿಸಬೇಕು ಎಂದು ಪ್ರೊ. ಶ್ರೀನಾಥ್ ರಾವ್ ಹೇಳಿದ್ದಾರೆ.
ನಿರ್ಭಯಾ ಅಪರಾಧಿಗಳಿಗೆ ಮಾರ್ಚ್ 20 ರಂದು ಗಲ್ಲು ಶಿಕ್ಷೆ ನೀಡಲಾಗಿದೆ.