ನವದೆಹಲಿ, ಮಾ.22 (Daijiworld News/MB) : ಜನರನ್ನು ಬಲಿ ಪಡೆದು ಕೊಳ್ಳುತ್ತಿರುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರಕಾರ ಖಾಸಗಿ ಹಾಗೂ ಸಾರ್ವಜನಿಕ ವಲಯವನ್ನು ಸಾಮರ್ಥ್ಯದಷ್ಟು ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಸೋಂಕು ಬರುವುದನ್ನು ತಡೆಗಟ್ಟಲು ತಪಾಸಣೆ ಮಾಡುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದು ಈ ತನಕ ಕೇವಲ 15,701 ಜನರ ಸ್ಯಾಂಪಲ್ನ್ನು ಪರೀಕ್ಷೆಷ ಮಾಡಲಾಗಿದೆ. ಇಷ್ಟು ಸಮಯವಕಾಶವಿದ್ದಾಗಲೂ, ಇತರ ದೇಶದ ಎಚ್ಚರಿಕೆ ಹಾಗೂ ಪಾಠದ ಹೊರತಾಗಿಯೂ ನಾವು ಸಾರ್ವಜನಿಕ ಹಾಗೂ ಖಾಸಗೀ ವಲಯವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಂಡಂತೆ ಕಾಣುತ್ತಿಲ್ಲ, ಇದು ಬದಲಾಗಬೇಕು ಎಂದರು.
ಅಗತ್ಯವಾದ ತೆರಿಗೆ ವಿನಾಯಿತಿ, ಬಡ್ಡಿ, ಸಬ್ಸಿಡಿ ಸೇರಿದಂತೆ ಸಮಗ್ರ ವಲಯವಾರು ಪರಿಹಾರ ಪ್ಯಾಕೇಜನ್ನು ಸರಕಾರವು ಕೂಡಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಎಲ್ಲಾ ಭಾರತೀಯರು ಮನೆಯಲ್ಲಿಯೇ ಉಳಿದುಕೊಳ್ಳಿ, ಹಿರಿಯರು ಹಾಗೂ ಮಕ್ಕಳ ಮೇಲೆ ಹೆಚ್ಚಿನ ನಿಗಾವಿಡಿ. ಮನೆಯಲ್ಲಿ ಉಳಿಯುವುದರಿಂದ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು. ಕೈ ಸ್ವಚ್ಛ ಮಾಡುವುದು, ಮುಖ ಸ್ಫರ್ಶ ಮಾಡದೆ ಇರುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದ್ದಾರೆ.