ಬೆಂಗಳೂರು, ಮಾ.22 (DaijiworldNews/PY) : ಪ್ರಯಾಣಿಕ ರೈಲು ಸೇವೆ ಸ್ಥಗಿತ ಆದೇಶ ಹೊರಬಿದ್ದ ಬೆನ್ನಲ್ಲೇ, ರಾಜ್ಯ ಸರ್ಕಾರವು ಎಲ್ಲಾ ಅಂತರಾಜ್ಯ ಬಸ್ ಸೇವೆಗಳನ್ನು ಮಾ.31ರವರೆಗೆ ಸ್ಥಗಿತಗೊಳಿಸಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ಸಲುವಾಗಿ ಈ ತೀಮಾನವನ್ನು ಸರ್ಕಾರ ತೆಗೆದುಕೊಂಡಿದೆ.
ಕೆಎಸ್ಆರ್ಟಿಸಿ ವೇಗದೂತ ಹಾಗೂ ರಾಜಹಂಸ ಬಸ್ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಇಲ್ಲದೇ ಪ್ರಯಾಣಿಸುವವರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆಯುವ ವ್ಯವಸ್ಥೆಯನ್ನು(ಬಸ್ನಲ್ಲಿ ಕೊರೊನಾ ಸೋಂಕಿತರು ಪ್ರಯಾಣಿಸಿದ ಸಂದರ್ಭದಲ್ಲಿ ಇತರ ಪ್ರಯಾಣಿಕರ ಮಾಹಿತಿ ದೊರೆಯದಂತಾಗುವ ಕಾರಣದಿಂದ) ಮುಂದಿನ ಆದೇಶದವರೆಗೆ ಈಗಿನಿಂದಲೇ ಆರಂಭಿಸಲಾಗುವುದು ಎಂದು ನಿಗಮ ತಿಳಿಸಿದೆ.