ಬೆಂಗಳೂರು, ಮಾ.22 (DaijiworldNews/PY) : ಮಾ.23ರಂದು ನಡೆಯಬೇಕಿದ್ದ ದ್ವಿತೀಯ ಪಿ.ಯು. ಪರೀಕ್ಷೆಯನ್ನು ರಾಜ್ಯ ಸರಕಾರ ಮುಂದೂಡಿದೆ.
ಈ ವರ್ಷದ ಅಂತಿಮ ವಿಷಯವಾಗಿ ಪಿಯು ವಿದ್ಯಾರ್ಥಿಗಳಗೆ ಮಾ.ಮಾ.23 ಸೋಮವಾರ ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಯಬೇಕಿತ್ತು. ಇದೀಗ ಅದನ್ನು ಮುಂದೂಡಲಾಗಿದೆ ಹಾಗೂ ಮುಂದಿನ ದಿನಾಂಕವನ್ನು ಮಾ.31ರ ಬಳಿಕ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.