ನವದೆಹಲಿ, ಮಾ.23 (Daijiworld News/MB) : ಕೊರೊನಾ ಸೋಂಕಿತರಿಗಾಗಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ವೆಂಟಿಲೇಟರ್ಗಳಿಗಾಗಿ ನಿಧಿಯನ್ನು ಸ್ಥಾಪನೆ ಮಾಡುವ ಅಗತ್ಯವಿದೆ. ನನ್ನ ಪೂರ್ಣ ವೇತನವನ್ನು ನಿಧಿಗೆ ದೇಣಿಗೆಯಾಗಿ ನೀಡುತ್ತೇನೆ ಎಂದು ಖ್ಯಾತ ಕೈಗಾರಿಕೋದ್ಯಮಿ ಆನಂದ ಮಹೀಂದ್ರ ಅವರು ಹೇಳಿದ್ದಾರೆ.
ಮುಂದೆ ಇನ್ನಷ್ಟು ದೇಣಿಗೆಯನ್ನು ನೀಡುವುದಾಗಿ ಹೇಲಿದ ಅವರು ಸ್ವಯಂಪ್ರೇರಿತರಾಗಿ ನಿಧಿಗೆ ದೇಣಿಗೆಗಳನ್ನು ನೀಡಲು ಇತರರಿಗೆ ಉತ್ತೇಜನ ನೀಡಿದ್ದಾರೆ.
ವೆಂಟಿಲೇಟರ್ಗಳನ್ನು ಉತ್ಪಾದಿಸುವ ಕುರಿತು ಮಹೀಂದ್ರ ಗ್ರೂಪ್ ಕೂಡಲೇ ಪರಿಶೀಲನೆ ನಡೆಸಲಿದೆ ಎಂದು ತಿಳಿಸದ್ದಾರೆ.
ಹಾಗೆಯೇ ತನ್ನ ಕಂಪನಿಗೆ ಸೇರಿದ ರೆಸಾರ್ಟ್ಗಳನ್ನು ಸೋಂಕುಪೀಡಿತರ ಚಿಕಿತ್ಸೆಗೆ ನೀಡಲು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. ತಾತ್ಕಾಲಿಕ ಆಸ್ಪತ್ರೆಗಳ ಸ್ಥಾಪನೆಗೆ ಸರಕಾರಕ್ಕೆ ಅಥವಾ ಸೇನೆಗೆ ನೆರವಾಗಲು ತನ್ನ ಯೋಜನಾ ತಂಡವು ತಯಾರಾಗಿದೆ ಎಂದು ಭಾನುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಭಾರತ ಸೋಂಕು ಹರಡುವಿಕೆ ಮೂರನೇ ಹಂತದಲ್ಲಿದೆ. ಸೋಂಕು ಪ್ರಕರಣಗಳಲ್ಲಿ ಹೆಚ್ಳ ಆಗುವ ಸಾಧ್ಯತೆಗಳಿವೆ. ಹಾಗಾಗಿ ವೈದ್ಯಕೀಯ ಮೂಲ ಸೌಕರ್ಯದ ಮೇಲೆ ಭಾರೀ ಒತ್ತಡವನ್ನು ಭೀರಬಹುದು. ಮುಂದಿನ ಕೆಲವು ವಾರಗಳವರೆಗೆ ಲಾಕ್ಡೌನ್ ಆಗುವ ಅಗತ್ಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.