ನವದೆಹಲಿ, ಮಾ.23 (Daijiworld News/MB) : ಪ್ರಧಾನಿ ಮೋದಿಯವರು ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳ ಜಿಲ್ಲೆಗಳಿಗೆ ಜಾರಿ ಮಾಡಿರುವ ಲಾಕ್ಡೌನ್ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಲಾಕ್ಡೌನ್ ಕುರತಾಗಿ ಜನರು ಇನ್ನೂ ಗಂಭೀರವಾಗಿಲ್ಲ ಎಂದು ಟ್ವೀಟ್ ಮೂಲಕ ಈ ಸೂಚನೆಯನ್ನು ನೀಡಿರುವ ಅವರು, ಜನರು ಇನ್ನೂ ಕೂಡಾ ಲಾಕ್ಡೌನ್ನ್ನು ಗಂಭೀರವಾಗಿ ಪರಿಗಣಿಸಿಲ್ಲ. ದಯವಿಟ್ಟು ನಿಮ್ಮನ್ನು ನೀವು ರಕ್ಷಿಸಿ. ನಿಮ್ಮ ಕುಟುಂಬವನ್ನು ರಕ್ಷಣೆ ಮಾಡಿ. ನಿಯಮಾವಳಿಗಳನ್ನು, ಸಲಹೆಗಳನ್ನು ಗಂಭೀರವಾಗಿ ಪಾಲಿಸಿ. ರಾಜ್ಯಗಳು ಲಾಕ್ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ದೇಶದ ಹಲವು ರಾಜ್ಯಗಳ 80 ನಗರ, ಜಿಲ್ಲೆಗಳನ್ನು ಲಾಕ್ಡೌನ್ ಮಾಡಲು ಆದೇಶಿಸಿದೆ. ಅದರಂತೆ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿ ಹಲವು ಮಹಾನಗರಗಳು, 75 ಜಿಲ್ಲೆಗಳು ಇಂದಿನಿಂದ ಲಾಕ್ಡೌನ್ ಆಗಿವೆ.