ನವದೆಹಲಿ, ಮಾ.23 (Daijiworld News/MB) : ಕೊರೊನಾ ಹರಡದಂತೆ ತಡೆಯಲು ಅನೇಕ ಜಿಲ್ಲೆಗಳನ್ನು ಲಾಕ್ಡೌನ್ ಮಾಡಿರುವ ಹಿನ್ನಲೆಯಿಂದಾಗಿ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಯಬೇಕಾಗಿರುವ ಪ್ರಕರಣಗಳನ್ನು ಮಾತ್ರ ಸ್ವೀಕರಿಸಲಿದೆ. ಇದಕ್ಕಾಗಿ ಒಂದು ನ್ಯಾಯಪೀಠ ಮಾತ್ರ ಲಭ್ಯವಿರುತ್ತದೆ. ಬುಧವಾರ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಈ ನಿರ್ಧಾರವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಕಟಿಸಿದ್ದು ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠವು ತುರ್ತು ವಿಚಾರಣೆ ನಡೆಯಬೇಕಾಗಿರುವ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಸೌಕರ್ಯವಿದೆ. ಸುಪ್ರೀಂಕೋರ್ಟ್ನ ಆವರಣದಲ್ಲಿಯೇ ಇದಕ್ಕೆ ಸೌಕರ್ಯ ಕಲ್ಪಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.