ಕೊಚ್ಚಿ, ಮಾ.23 (Daijiworld News/MB) : ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ನಿಯಮಗಳನ್ನು ಉಲ್ಲಂಘನೆ ಮಾಡಿ ಚರ್ಚ್ನಲ್ಲಿ ಪ್ರಾರ್ಥನಾ ಕೂಟ ನಡೆಸಿದ ಆರೋಪದಲ್ಲಿ ಕೇರಳದ ಕ್ಯಾಥೋಲಿಕ್ ಪಾದ್ರಿ ಪಿ.ಪೌಲಿ ಅವರನ್ನು ಬಂಧಿಸಲಾಗಿದೆ.
ಆದೇಶ ಉಲ್ಲಂಘಿಸಿದ ಕಾರಣದಿಂದಾಗಿ ಪಾದ್ರಿಯನ್ನು ಬಂಧನ ಮಾಡಲಾಗಿದ್ದು ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಚಲಕುಡಿ ಪೊಲೀಸರು ತಿಳಿಸಿದ್ದಾರೆ.
ಕುಡಪುಝ ನಿತ್ಯಸಹಾಯ ಮಠ ಚರ್ಚ್ನಲ್ಲಿ ಪ್ರಾರ್ಥನ ಕೂಟ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪಾದ್ರಿಯನ್ನು ಬಂಧನ ಮಾಡಲಾಗಿದೆ.
ಪಾದ್ರಿಯನ್ನು ಬಂಧನ ಮಾಡುವ ಮೊದಲು ಪೊಲೀಸರು ಸ್ಯಾನಿಟೈಸರ್ ನೀಡಿ ಕೈಸ್ವಚ್ಛಗೊಳಿಸುವಂತೆ ತಿಳಿಸಿದ್ದು ಆ ಬಳಿಕ ಬಂಧನ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಹಾಗೆಯೇ ಬೆಳಿಗ್ಗೆ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸುಮಾರು 100 ಜನಸಾಮಾನ್ಯರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಚಿಂತಿಸುತ್ತಿದ್ದಾರೆ.