ನವದೆಹಲಿ, ಮಾ 24 (DaijiworldNews/SM): ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದೆಲ್ಲೆಡೆ ಲಾಕ್ ಡೌನ್ ಮಾಡಿ ಆದೇಶ ನೀಡಿದ್ದಾರೆ. ಈ ನಡುವೆ ಅಗತ್ಯ ಸೇವೆಗೆ ದೇಶದಲ್ಲಿ ಯಾವುದೇ ಸಮಸ್ಯೆಯಾಗದು. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ನಿಯಂತ್ರಣ ಮಾಡಲು ಹಾಗೂ ಅದರ ನಿಯಂತ್ರಣಕ್ಕೆ ದೇಶವನ್ನೇ ಲಾಕ್ ಡೌನ್ ಮಾಡದೆ ಬೇರೆ ದಾರಿಯಿಲ್ಲ.
ವಿಶ್ವದಲ್ಲಿ ಮೊದಲ ಒಂದು ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಲು 67 ದಿನಗಳು ಬೇಕಾಯಿತು. ಆದರೆ, ಬಳಿಕ 1 ಲಕ್ಷ ಜನರಿಗೆ 11 ದಿನಗಳಲ್ಲಿ ಸೋಂಕು ಹರಡಿದೆ. ಆದರೆ, ಮುಂದಿನ 1 ಲಕ್ಷ ಜನರಿಗೆ ಕೇವಲ ಮೂರೇ ಮೂರು ದಿನದಲ್ಲಿ ಸೋಂಕು ಹರಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ.
ಇನ್ನು ಸೋಂಕು ನಿಯಂತ್ರಣಕ್ಕೆ 15 ಸಾವಿರ ಕೋಟಿ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಮೀಸಲಿಟ್ಟಟ್ಟಿದ್ದಾರೆ. ಹಾಗೂ ಜನರು ಎಚ್ಚರಿಕೆಯನ್ನು ಪಾಲಿಸುವ ಅಗತ್ಯವಿದೆ.
21 ದಿನ ಲಾಕ್ ಡೌನ್ ನಿಮ್ಮ ಪ್ರಾಣ ಉಳಿಸಲು ಎಂದಿದ್ದಾರೆ. ದೇಶದ ಪ್ರತೀ ನಾಗರಿಕನಿಗೂ ಇದು ಅನ್ವಯವಾಗಲಿದೆ. ಜನಸಾಮಾನ್ಯರಿಂದ ಹಿಡಿದು, ಪ್ರಧಾನಿ ನರೇಂದ್ರ ಮೋದಿಯವರ ತನಕ ಲಾಕ್ ಡೌನ್ ಆದೇಶ ಪಾಲಿಸಿ ಮನೆಯಲ್ಲಿರುವುದು ಅನಿವಾರ್ಯ ಎಂದಿದ್ದಾರೆ.