ಬೆಂಗಳೂರು, ಮಾ.25 (Daijiworld News/MB) : ಹಿಂದೂ ಧರ್ಮೀಯ ಹೊಸ ವರುಷದ ಹರುಷ ತಂದು ಕೊಡುವ ಯುಗಾದಿಯು ಈ ವರ್ಷ ಮಾತ್ರ ಕಳೆಗುಂದಿದೆ. ಕೊರೊನಾ ಭೀತಿಯಿಂದಾಗಿ ದೇಶವೇ ಲಾಕ್ಡೌನ್ ಆಗಿದ್ದು ಹಬ್ಬದ ಸಂಭ್ರಮ-ಸಡಗರ ಮಂಕಾಗಿದೆ.
ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳವಾರ ರಾತ್ರಿ 12 ರಿಂದ ಇನ್ನು 21 ದಿನಗಳ ಕಾಲ ಭಾರತ ಲಾಕ್ಡೌನ್ ಮಾಡಿ ಪ್ರಧಾನಿ ಮೋದಿ ಆದೇಶಿಸಿದ್ದು ಬುಧವಾರ ವರುಷವೂ ಇರುವ ಯುಗಾದಿ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ.
ಸಾಮಾನ್ಯವಾಗಿ ಯುಗಾದಿ ಎಂದರೆ ಜನರು ಸಂಭ್ರಮದಿಂದ ಇರುತ್ತಾರೆ. ಯುಗಾದಿ ಹಬ್ಬದ ದಿನ ಹಾಗೂ ಅದರ ಮುಂಚಿನ ದಿನ ನಗರದಲ್ಲಿ ಜನರ ಓಡಾಟ ಹೆಚ್ಚಾಗಿ ಇರುತ್ತದೆ. ಆದರೆ ಈ ವರ್ಷದ ಯುಗಾದಿ ಸಂದರ್ಭದಲ್ಲಿ ಜನರ ಓಡಾಟ ಕಡಿಮೆಯಾಗಿದೆ.
ಇನ್ನು ಹಬ್ಬವೆಂದು ಜೀವನದ ಜೊತೆ ಆಟವಾಡಬೇಡಿ ಎಂದು ಪೊಲೀಸರು, ಸರ್ಕಾರ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಿದ್ದರೂ ಲಾಕ್ಡೌನ್ ಆದೇಶವಿದ್ದರೂ ದೇಶದ ಹಲವು ಕಡೆಗಳಲ್ಲಿ ಜನರು ಮಂಗಳವಾರ ಹಬ್ಬದ ತಯಾರಿಗಾಗಿ ಓಡಾಡಿದ್ದು ಬುಧವಾರವೂ ಕೂಡಾ ಮಾರುಕಟ್ಟೆಗಳಲ್ಲಿ ಜನರಿದ್ದಾರೆ. ಹಲವು ಕಡೆಗಳಲ್ಲಿ ರ್ಮಾಸೂಚಿ ಉಲ್ಲಂಘನೆ ಮಾಡಿದವರನ್ನು ಬಂಧನ ಮಾಡಲಾಗಿದೆ.
ಜನರು ಹಬ್ಬದ ನೆಪದಲ್ಲಿ ಓಡಾಟ ನಡೆಸಿದ್ದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.